alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲಿನಲ್ಲಿದ್ದ ಆ ಚಿತ್ರ ಕುಟುಂಬದ ನೆಮ್ಮದಿಯನ್ನೇ ಕೆಡಿಸಿತು

ಆತನೊಬ್ಬ ಯಶಸ್ವಿ ಉದ್ಯಮಿ. ಇರಲು ಚೆಂದದ ಮನೆ, ಮುದ್ದಾದ ಮಕ್ಕಳು, ಸುಂದರವಾದ ಮಡದಿ. ಒಟ್ಟಿನಲ್ಲಿ ಸ್ವಗರ್ಕ್ಕೆ ಕಿಚ್ಚು ಹಚ್ಚುವಂತಹ ಸಂಸಾರ ಅವರದ್ದು. ಈ ಸುಂದರ ಸಂಸಾರದ ನೆಮ್ಮದಿಯನ್ನು ಮೊಬೈಲ್ ಕಸಿದುಕೊಂಡಿದ್ದು ಆಶ್ಚರ್ಯವಾದರೂ ಸತ್ಯ.

ಉದ್ಯಮಿ ತನ್ನ ಮೊಬೈಲಿನಲ್ಲಿ ಪತ್ನಿಯ ನಗ್ನ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಒಂದು ದಿನ ಆ ಮೊಬೈಲ್ ಕಳೆದುಕೊಂಡಿದ್ದಾನೆ. ಇದನ್ನು ಲಪಟಾಯಿಸಿದವನು ಆ ಸಂಸಾರದ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಆ ಮೊಬೈಲಿನಲ್ಲಿದ್ದ ಫೋಟೋಗಳನ್ನು ಅಂತರ್ಜಾಲ ತಾಣ ಹಾಗೂ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ.

ಇದನ್ನು ಹೇಗೋ ತಿಳಿದ ಉದ್ಯಮಿ ಪೊಲೀಸರಿಗೆ ದೂರು ನೀಡಿ ಆ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ತೆಗೆಸಿ ಹಾಕಿದ್ದರೂ ಮತ್ತೆ ಹೊಸ ಹೊಸ ಹೆಸರುಗಳಲ್ಲಿ ಉದ್ಯಮಿ ಪತ್ನಿಯ ನಗ್ನ ಚಿತ್ರಗಳನ್ನು ಅಂತರ್ಜಾಲ ತಾಣದಲ್ಲಿ ಹಾಕಲಾಗಿದೆ. ಇದರಿಂದ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿರುವ ಉದ್ಯಮಿ ಕುಟುಂಬ ಕಂಗಾಲಾಗಿದೆ.

ಆದರೆ ಈ ವಿಷಯದಲ್ಲಿ ಪೊಲೀಸರೂ ಅಸಹಾಯಕರಾಗಿದ್ದು, ಇದು ಹೊರ ದೇಶದ ಸರ್ವರ್ ನಿಂದ ಹಾಕಲಾಗುತ್ತಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲವೆಂದು ಕೈ ಚೆಲ್ಲಿದ್ದಾರೆ. ಇದೆಲ್ಲದರಿಂದಾಗಿ ಉದ್ಯಮಿ ಕುಟುಂಬ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

ಈ ಘಟನೆ ಎಲ್ಲರಿಗೂ ಒಂದು ಎಚ್ಚರಿಕೆ ಪಾಠವಾಗಿದ್ದು, ಮೊಬೈಲಿನಲ್ಲಿ ಇಂತಹ ಚಿತ್ರಗಳಷ್ಟೇ ಅಲ್ಲ. ಬ್ಯಾಂಕ್ ವಿವರ ಮತ್ತಿತರೆ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಡುವುದು ಆಪಾಯಕಾರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...