alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗಲಿದೆ ನಿಮ್ಮ ಮೊಬೈಲ್ ನಂಬರ್

ನಿಮ್ಮ ಮೊಬೈಲ್ ನಂಬರ್ ಬದಲಾಗಲಿದೆ. ಹೌದು, ಆಶ್ಚರ್ಯವಾದ್ರೂ ಇದು ಸತ್ಯ. ಕೇಂದ್ರ ಸಂವಹನ ಸಚಿವಾಲಯ ಎಲ್ಲ ರಾಜ್ಯಗಳಿಗೂ ಈ ಬಗ್ಗೆ ನಿರ್ದೇಶನ ನೀಡಿದೆ. ಇನ್ಮುಂದೆ 10 ಸಂಖ್ಯೆ ಬದಲು 13 ಸಂಖ್ಯೆಯಾಗಲಿದೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಿಎಸ್ಎನ್ಎಲ್ ಕೂಡ ತಯಾರಿ ಶುರು ಮಾಡಿದೆ. ಡಿಸೆಂಬರ್ 31,2018 ರೊಳಗೆ ಎಲ್ಲ ಮೊಬೈಲ್ ನಲ್ಲಿಯೂ 13 ಸಂಖ್ಯೆ ಸಿಗಲಿದೆ. ಜುಲೈ 1ರಿಂದ ಕಾರ್ಯ ಶುರುವಾಗಲಿದೆ.

ಅಕ್ಟೋಬರ್ ಒಳಗೆ 10 ಸಂಖ್ಯೆ ಹೊಂದಿರುವ ಎಲ್ಲ ಮೊಬೈಲ್ 13 ಸಂಖ್ಯೆಗೆ ಅಪ್ಗ್ರೇಡ್ ಆಗಲಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. 13 ಸಂಖ್ಯೆಯಲ್ಲಿ ಭಾರತದ ಕೋಡ್ (+91) ಇರಲಿದೆಯಾ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 10 ಸಂಖ್ಯೆಯ ಸರಣಿ ಬಹುತೇಕ ಪೂರ್ಣವಾಗಿದೆ. ಹಾಗಾಗಿ ಮೊಬೈಲ್ ಸಂಖ್ಯೆಯನ್ನು 13ಕ್ಕೇರಿಸಲು ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...