alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಯಲ್ ರೂಂನಲ್ಲಿ ಮೊಬೈಲ್ ನೋಡಿದ ವಿದ್ಯಾರ್ಥಿನಿ ಮಾಡಿದ್ಲು..

2016_5

ದೊಡ್ಡ ಮಾಲ್ ಇರಲಿ ಚಿಕ್ಕ ಅಂಗಡಿಯಿರಲಿ ಟ್ರಯಲ್ ರೂಂ ಮಹಿಳೆಯರಿಗೆ ಸೇಫ್ ಅಲ್ಲ. ಮೊಬೈಲ್ ಅಥವಾ ಸಿಸಿ ಟಿವಿ ಮೂಲಕ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡಲಾಗುತ್ತೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ಸುದ್ದಿಗಳು ಈಗಾಗಲೇ ಬಂದಿವೆ. ಈಗ ಮತ್ತೊಂದು ಘಟನೆ ಹೊರಬಿದ್ದಿದೆ.

ಮಧ್ಯಪ್ರದೇಶದ ಇಂದೋರ್ ನ ಬಟ್ಟೆ ಅಂಗಡಿಗೆ ವಿದ್ಯಾರ್ಥಿನಿಯೊಬ್ಬಳು ಹೋಗಿದ್ದಾಳೆ. ಅಲ್ಲಿ ಟ್ರಯಲ್ ನೋಡಲು ಮುಂದಾಗಿದ್ದಾಳೆ. ಆದ್ರೆ ಅಲ್ಲಿಗೆ ಹೋಗ್ತಾ ಇದ್ದಂತೆ, ಮೇಲಿನಿಂದ ಯಾರೋ ಮೊಬೈಲ್ ನಲ್ಲಿ ಫೋಟೋ ತೆಗೆದ ಅನುಭವವಾಗಿದೆ. ಹಾಗಾಗಿ ವಿದ್ಯಾರ್ಥಿನಿ ತಕ್ಷಣ ಹೊರಗೆ ಬಂದಿದ್ದಾಳೆ.

ಆಕೆ ಹೊರಗೆ ಬರ್ತಾ ಇದ್ದಂತೆ ಅಲ್ಲಿಂದ ಒಬ್ಬ ವ್ಯಕ್ತಿ ಹೊರಗೆ ಬರ್ತಿರುವುದನ್ನು ಆಕೆ ನೋಡಿದ್ದಾಳೆ. ತಂದೆಗೆ ಈ ವಿಷಯವನ್ನು ಹೇಳಿದ್ದಾಳೆ. ತಂದೆ ಅಲ್ಲಿಯೇ ಕೆಲಸ ಮಾಡ್ತಿದ್ದ ಆ ವ್ಯಕ್ತಿಯನ್ನು ಹಿಡಿದಿದ್ದಾರೆ. ಆದ್ರೆ ಮೊಬೈಲ್ ನಲ್ಲಿ ಯಾವುದೇ ಫೋಟೋ ಸಿಗಲಿಲ್ಲ. ಸಿಸಿ ಟಿವಿ ಕೂಡ ಕೆಲಸ ಮಾಡ್ತಾ ಇರಲಿಲ್ಲ. ಅಲ್ಲಿಗೆ ಬಂದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...