alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದ ಯುವತಿಯರಿಗಿಲ್ಲ ಮೊಬೈಲ್ ಬಳಸುವ ಭಾಗ್ಯ

5622Phone-girlರಾಜಸ್ಥಾನ: ಜಗತ್ತು ಮಾಹಿತಿ ತಂತ್ರಜ್ಞಾನಕ್ಕಾಗಿ ತೆರೆದುಕೊಳ್ಳುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ‘ಡಿಜಿಟಲ್ ಇಂಡಿಯಾ’ ಗೆ ಚಾಲನೆ ನೀಡಿದ್ದಾರೆ. ಆದರೆ ಈ ಪಂಚಾಯಿತಿ ಮಾತ್ರ ಯುವತಿಯರು ಮೊಬೈಲ್ ಬಳಸಬಾರದು, ಇಂಟರ್ನೆಟ್ ವೀಕ್ಷಿಸಬಾರದು ಎಂಬ ಫರ್ಮಾನು ಹೊರಡಿಸಿದೆ.

ರಾಜಸ್ಥಾನದ ಗ್ರಾಮವೊಂದರ ಖಾಪ್ ಪಂಚಾಯಿತಿ ಈ ಆದೇಶವನ್ನು ಹೊರಡಿಸಿದ್ದು, ಯುವತಿಯರು ಜೀನ್ಸ್ ಸಹ ಧರಿಸಬಾರದೆಂದು ಹೇಳಿದೆ. ಅಲ್ಲದೇ ವಿವಾಹ ಸಂದರ್ಭಗಳಲ್ಲಿ ವರ ಧೋತಿಯನ್ನೇ ಧರಿಸಬೇಕೆಂದು ಹುಕುಂ ನೀಡಿದೆ. ಯುವತಿಯರು ಮೊಬೈಲ್ ಬಳಸಬಾರದು, ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಬಾರದೆಂದು ಹೊರಡಿಸಿರುವ ಆದೇಶಕ್ಕೆ ಸಮರ್ಥನೆಯನ್ನೂ ಪಂಚಾಯಿತಿ ಮುಖಂಡರು ನೀಡಿದ್ದಾರೆ.

ಮೊಬೈಲ್ ನಲ್ಲಿ ತಮ್ಮ ಚಿತ್ರ ತೆಗೆದುಕೊಳ್ಳುವ ಯುವತಿಯರು ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ವೇಳೆ ದುರ್ಬಳಕೆಯಾಗುವ ಸಾಧ್ಯತೆಯಿರುತ್ತದೆ ಎಂಬ ಸಮಜಾಯಿಷಿಯನ್ನೂ ಪಂಚಾಯಿತಿ ನೀಡಿದೆ. ಕೆಲವೊಂದು ಉತ್ತಮ ನಿರ್ಣಯಗಳನ್ನೂ ಪಂಚಾಯಿತಿ ತೆಗೆದುಕೊಂಡಿದ್ದು, ಬಾಲ್ಯ ವಿವಾಹ ನಿಷೇಧ, ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವುದು ಹಾಗೂ ಗ್ರಾಮಸ್ಥರು ಮದ್ಯಪಾನ ಮಾಡಿದರೆ ಶಿಕ್ಷೆ ಮೊದಲಾದವು ಇದರಲ್ಲಿ ಸೇರಿದೆ. ಯುವತಿಯರು ಮೊಬೈಲ್ ಬಳಸಬಾರದು ಹಾಗೂ ಜೀನ್ಸ್ ಧರಿಸಬಾರದೆಂದು ಕೈಗೊಂಡಿರುವ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...