alex Certify
ಕನ್ನಡ ದುನಿಯಾ       Mobile App
       

Kannada Duniya

ಲೆನಿನ್ ಪ್ರತಿಮೆ ನೆಲಕ್ಕುರುಳಿಸಿದ ಬಿಜೆಪಿ ಬೆಂಬಲಿಗರು

ತ್ರಿಪುರಾದ ಬೆಲೊನಿಯಾದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ. ಕೇಸರಿ ವಸ್ತ್ರ ತೊಟ್ಟ ಬಿಜೆಪಿ ಬೆಂಬಲಿಗರು, ರಷ್ಯಾದ ಮಾಜಿ ನಾಯಕ ಹಾಗೂ ಕಮ್ಯೂನಿಸ್ಟ್ ಸಿದ್ಧಾಂತವಾದಿ ವ್ಲಾಡಿಮಿರ್ ಲೆನಿನ್ ಪ್ರತಿಮೆಯನ್ನು ನೆಲಕ್ಕುರುಳಿಸಿದ್ದಾರೆ.

ಬಿಜೆಪಿ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ 48 ಗಂಟೆ ಕಳೆಯುವಷ್ಟರಲ್ಲಿ ಈ ಘಟನೆ ನಡೆದಿದೆ. ಲೆನಿನ್ ಒಬ್ಬ ಕ್ರಾಂತಿಕಾರಿ ನಾಯಕ, ಭಾರತದಲ್ಲಿ ಆಡಳಿತವನ್ನೇನೂ ನಡೆಸಿರಲಿಲ್ಲ. ಆದ್ರೆ ಆತನ ಕಮ್ಯೂನಿಸ್ಟ್ ಸಿದ್ಧಾಂತವನ್ನು ಕೆಲವರು ಮೆಚ್ಚಿಕೊಂಡಿದ್ದರು.

ಕಮ್ಯೂನಿಸ್ಟ್ ಪಕ್ಷಗಳು ಲೆನಿನ್ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿದ್ದವು. ಭಾರತ್ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಗುಂಪೊಂದು ಬುಲ್ಡೋಜರ್ ಮೂಲಕ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ಶಾಂತಿ ಭಂಗ ಯತ್ನ ಮಾಡದಂತೆ ಪೊಲೀಸರು ಈಗಾಗ್ಲೇ ಬಿಜೆಪಿ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ತ್ರಿಪುರಾ ರಾಜ್ಯಪಾಲರಿಗೆ ಕರೆ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿದ್ದಾರೆ. ಸಿಪಿಎಂ ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಗೆಲುವಿನ ಬಳಿಕ ಕಾರ್ಯಕರ್ತರು ಸಿಪಿಎಂ ಕಚೇರಿಗಳಿಗೆ ಬೆಂಕಿ ಹಚ್ಚಿದ್ದು, 240 ಜನರು ಗಾಯಗೊಂಡಿದ್ದಾರೆಂದು ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...