alex Certify
ಕನ್ನಡ ದುನಿಯಾ       Mobile App
       

Kannada Duniya

ವಾಯು ವಿಹಾರಕ್ಕೆ ತೆರಳಿದ್ದ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ

images (1)ವಾಯು ವಿಹಾರಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ, ಮಳೆ ಬರುತ್ತಿದ್ದ ಕಾರಣ ಅಂಗಡಿಯೊಂದರ ಮುಂದೆ ಆಶ್ರಯ ಪಡೆದುಕೊಂಡ ವೇಳೆ ಆತನನ್ನು ಕಳ್ಳನೆಂದು ಭಾವಿಸಿದ ಸಾರ್ವಜನಿಕರ ಗುಂಪೊಂದು ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿರುವ ಘಟನೆ ಗುವಾಹತಿಯ ಉದಲ್ಗುರಿ ಜಿಲ್ಲೆಯ ಹರಿಸಿಂಗಾದಲ್ಲಿ ನಡೆದಿದೆ.

14 ವರ್ಷದ ಬುಡಕಟ್ಟು ಸಮುದಾಯದ ವಿದ್ಯಾರ್ಥಿ, ಸನ್ಸುಮಾ ರಾಮ್ಬಿಯಾರಿ ಹಲ್ಲೆಗೊಳಗಾದವನಾಗಿದ್ದು, ವಿದ್ಯಾರ್ಥಿಯನ್ನು ಹಿಡಿದುಕೊಂಡ ಗುಂಪು ಮನುಷ್ಯತ್ವವನ್ನೇ ಮರೆತು ಕಂಬಕ್ಕೆ ಕಟ್ಟಿ ಥಳಿಸಿ, ಬ್ಲೇಡಿನಿಂದ ಕೊಯ್ದು ಚಿತ್ರ ಹಿಂಸೆ ನೀಡಿದೆ. ಜೊತೆಗೆ ಆತನ ಕಣ್ಣಿಗೆ ತೀವ್ರವಾಗಿ ಗಾಯಗೊಳಿಸಿದೆ.

ಸನಿಹದಲ್ಲಿಯೇ ಪೊಲೀಸ್ ಠಾಣೆಯಿದ್ದರೂ ವಿದ್ಯಾರ್ಥಿಯ ರಕ್ಷಣೆಗೆ ಯಾರೂ ಬಂದಿಲ್ಲವೆಂದು ಆರೋಪಿಸಲಾಗಿದ್ದು, ವಿಷಯ ತಿಳಿದ ಆತನ ಸಹೋದರ ಸನ್ಸುಮಾನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆತ ತನ್ನ ಒಂದು ಕಣ್ಣು ಕಳೆದುಕೊಂಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...