alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ರಿಕ್ತರಿಂದ ಬೆಂಕಿ, ಭಸ್ಮವಾಯ್ತು ಶಾಸಕರ ಮನೆ

ಜೈಪುರ: ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಪರಿಷ್ಕರಣೆ ತೀರ್ಪು ವಿರೋಧಿಸಿ, ನಡೆದ ಪ್ರತಿಭಟನೆ, ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಮಂಗಳವಾರವೂ ಹಿಂಸಾಚಾರ ಮುಂದುವರೆದಿದೆ.

ರಾಜಸ್ತಾನದ ಕರೌಲಿ ಜಿಲ್ಲೆಯ ಹಿಂದುವಾನ್ ಪಟ್ಟಣದಲ್ಲಿ ಉದ್ರಿಕ್ತರ ಗುಂಪು ದಲಿತ ರಾಜಕಾರಣಿಗಳಿಬ್ಬರ ಮನೆಗೆ ಬೆಂಕಿ ಹಚ್ಚಿದೆ. 5000 ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದು, ಶಾಸಕರಾದ ರಾಜ್ ಕುಮಾರಿ ಜಾಥವ್, ಮಾಜಿ ಶಾಸಕ ಭೋರೋಸಿಲಾಲ್ ಜಾಥವ್ ಅವರ ನಿವಾಸಗಳನ್ನು ಸುಟ್ಟು ಹಾಕಿದ್ದಾರೆ.

ಸೋಮವಾರ ಕರೆ ನೀಡಲಾಗಿದ್ದ ಭಾರತ್ ಬಂದ್ ಹಿಂಸಾಚಾರ ಮಂಗಳವಾರವೂ ಮುಂದುವರೆದಿದೆ. ಹಿಂದುವಾನ್ ಪಟ್ಟಣದಲ್ಲಿ ಉದ್ರಿಕ್ತರ ಗುಂಪು ಜನಪ್ರತಿನಿಧಿಗಳ ಮನೆಗೆ ಬೆಂಕಿಯನ್ನು ಹಚ್ಚಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿಯನ್ನು ಬಂಧಿಸಲಾಗಿದೆ ಎಂದು ಕರೌಲಿ ಜಿಲ್ಲೆಯ ಎಸ್.ಪಿ. ಅನಿಲ್ ಕಯಾಲ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...