alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹವಾಗಲು ಬಂದಿದ್ದ ಯುವಕನ ಮೇಲೆ ಹಲ್ಲೆ

ಬಲಪಂಥೀಯ ಸಂಘಟನೆಗಳ ಗುಂಪೊಂದು ಗಾಜಿಯಾಬಾದ್ ಕೋರ್ಟ್ ಆವರಣದಲ್ಲಿ ಅಲ್ಪಸಂಖ್ಯಾತ ಸಮುದಾಯ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಆತನ ಕಾರನ್ನು ಜಖಂಗೊಳಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಆರು ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ.

ನೋಯ್ಡಾದ ಸಲ್ಲಾಪುರ್ ಗ್ರಾಮದ ಸಾಹಿಲ್ ಖಾನ್ ಎಂಬ ಯುವಕ ಮಧ್ಯ ಪ್ರದೇಶದ ಪ್ರೀತಿ ಸಿಂಗ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಜೂನ್ 24ರಂದು ವಿವಾಹದ ನೊಂದಣಿ ಕಾರ್ಯಕ್ಕೆ ಆತ ಯುವತಿ ಸಮೇತನಾಗಿ ಆಗಮಿಸುತ್ತಿದ್ದಾನೆ ಎಂಬ ಮಾಹಿತಿ ಪಡೆದ ಗುಂಪು ಮೊದಲೇ ಕೋರ್ಟ್ ಬಳಿ ಜಮಾಯಿಸಿತ್ತು. ಅವರು ಆಗಮಿಸಿದ ಕೂಡಲೇ ಗುಂಪು ಸಾಹಿಲ್ ಮೇಲೆ ಹಲ್ಲೆ ನಡೆಸೋಕೆ ಶುರುಮಾಡಿತು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ನೋಯ್ಡಾದಲ್ಲಿ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇವರುಗಳು ಪರಸ್ಪರ ಪ್ರೀತಿಸುತ್ತಿದ್ದರು. ಘಟನೆಯಲ್ಲಿ ಯುವತಿಯ ಮೇಲೆ ಹಲ್ಲೆ ನಡೆದಿಲ್ಲ. ಘಟನೆಯ ಬಳಿಕ ಯುವಕನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ಯುವಕನಿಂದ ಯಾವುದೇ ದೂರು ದಾಖಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...