alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಮೇಲೆ ಕಾರು ಹರಿಸಿದವನನ್ನು ಹೊಡೆದು ಕೊಂದ ಗ್ರಾಮಸ್ಥರು

ಪಂಜಾಬ್ ನ ಲುಧಿಯಾನಾದಲ್ಲಿ ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಜನರೇ ಥಳಿಸಿ ಹತ್ಯೆ ಮಾಡಿದ್ದಾರೆ. ಟಿಬ್ಬಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ವ್ಯಕ್ತಿ ಶರವೇಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ. ನಿಯಂತ್ರಣ ತಪ್ಪಿ, ಮನೆ ಮುಂದೆ ಕುಳಿತಿದ್ದ ನಾಲ್ವರು ಮಕ್ಕಳಿಗೆ ಡಿಕ್ಕಿ ಹೊಡೆಸಿದ್ದಾನೆ.

ಅರ್ಮಾನ್ ಎಂಬ ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಉಳಿದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಸಂಜೀವ್ ಕುಮಾರ್ ಕೂಡ ಅಪಘಾತದಲ್ಲೇ ಮೃತಪಟ್ಟಿದ್ದಾನೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಆದ್ರೆ ಸಂಜೀವ್ ಕುಮಾರ್ ನನ್ನು ಗ್ರಾಮಸ್ಥರೇ ಹತ್ಯೆ ಮಾಡಿದ್ದಾರೆಂಬ ಮಾಹಿತಿಯೂ ಇದೆ. ಮಗು ಸಾವಿನಿಂದ ಜನ ರೊಚ್ಚಿಗೆದ್ದಿದ್ರು. ಎಲ್ಲರೂ ಒಟ್ಟಾಗಿ ಸಂಜೀವ್ ಕುಮಾರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಏಟು ತಾಳಲಾರದೆ ಆತ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...