alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪ ಶಾಸಕ, ಮಗ ವಿಧಾನಸಭೆಯಲ್ಲಿ ಜವಾನ…!

ರಾಜಕಾರಣಿಗಳಿಗೆ ತಮ್ಮ ಮಕ್ಕಳನ್ನು ಕೂಡ ರಾಜಕಾರಣಿಗಳನ್ನಾಗಿ ಮಾಡಬೇಕು ಎಂಬ ಆಸೆ ಸಹಜ. ಆದ್ರೆ ರಾಜಸ್ಥಾನದ ಶಾಸಕರೊಬ್ಬರು ತಮ್ಮ ಮಗನಿಗೆ ಸರ್ಕಾರಿ ಕೆಲಸ ಸಿಕ್ಕಿದೆಯಲ್ಲಾ ಅಂತಾ ತೃಪ್ತಿಪಟ್ಟಿದ್ದಾರೆ. ಅಷ್ಟಕ್ಕೂ ಶಾಸಕರ ಮಗನಿಗೆ ಸಿಕ್ಕಿರೋ ಉದ್ಯೋಗ ಯಾವುದು ಗೊತ್ತಾ? ರಾಜಸ್ಥಾನ ವಿಧಾನಸಭೆಯಲ್ಲಿ ಜವಾನ ಆತ.

ಜಮ್ವಾ ರಾಮಗಢ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ನಾರಾಯಣ ಮೀನಾ ಅವರ ಪುತ್ರ ರಾಮ್ ಕಿಷನ್ ಗೆ ಗ್ರೇಡ್ 4ರ ಸರ್ಕಾರಿ ನೌಕರಿ ದೊರೆತಿದೆ. 18,008 ಅಭ್ಯರ್ಥಿಗಳ ಪೈಕಿ 18 ಜನರಿಗೆ ಉದ್ಯೋಗ ದೊರೆತಿದ್ದು, ಅವರಲ್ಲಿ ಶಾಸಕರ ಪುತ್ರ ರಾಮ್ ಕಿಷನ್ ಕೂಡ ಒಬ್ಬರು.

ಆದ್ರೆ ಶಾಸಕನ ಪುತ್ರನನ್ನು ನೇಮಕ ಮಾಡಿರುವ ಬಗ್ಗೆ ಉನ್ನತ ತನಿಖೆ ಆಗಬೇಕೆಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಒತ್ತಾಯಿಸಿದ್ದಾರೆ. 15 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿರೋ ಬಿಜೆಪಿ ಸರ್ಕಾರ ಈಗ ಸ್ವಜನ ಪಕ್ಷಪಾತ ಮಾಡುತ್ತಿದೆ ಅಂತಾ ಆರೋಪಿಸಿದ್ದಾರೆ.

ಆದ್ರೆ ಈ ಆರೋಪಗಳನ್ನು ಶಾಸಕ ಮೀನಾ ತಳ್ಳಿಹಾಕಿದ್ದಾರೆ. ತಮ್ಮ ಪುತ್ರ ಮೆಟ್ರಿಕ್ ಪಾಸು ಮಾಡಿದ್ದು, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ ಅಂತಾ ಹೇಳಿದ್ದಾರೆ. ರಾಜಕೀಯ ಎಲ್ಲರಿಗೂ ಆಗಿಬರುವುದಿಲ್ಲ, ಹಾಗಾಗಿ ಮಗ ಕೂಡ ರಾಜಕಾರಣಿಯಾಗಬೇಕೆಂದು ಬಯಸುವುದಿಲ್ಲ ಅಂತಾನೂ ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...