alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾ ವಿರುದ್ದ ಕಿಡಿ ಕಾರಿದ ಪನ್ನೀರ್ ಸೆಲ್ವಂ ಬೆಂಬಲಿಗ

sasikala-addressಮುಖ್ಯಮಂತ್ರಿ ಗಾದಿಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ನಡೆಯುತ್ತಿರುವ ಹಗ್ಗ- ಜಗ್ಗಾಟ ಇನ್ನೂ ಮುಂದುವರೆದಿದ್ದು, ಗುರುವಾರ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್ ರನ್ನು ಭೇಟಿ ಮಾಡಿರುವ ಉಭಯ ನಾಯಕರು ತಮ್ಮ ಅಹವಾಲನ್ನು ಮಂಡಿಸಿದ್ದಾರೆ.

ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬ ಕುತೂಹಲದ ಮಧ್ಯೆ, ಎಐಎಡಿಎಂಕೆ ಶಾಸಕರನ್ನು ಶಶಿಕಲಾ ಮತ್ತವರ ಬೆಂಬಲಿಗರು ಬಂಧಿಸಿಟ್ಟಿದ್ದಾರೆಂದು ಎಐಎಡಿಎಂಕೆ ಮುಖಂಡ ವಿ. ಮೈತ್ರೇಯನ್ ಅರೋಪಿಸಿದ್ದಾರೆ.

ತಮಗೆ 134 ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿರುವ ಶಶಿಕಲಾ, ಶಾಸಕರನ್ನು ಅಜ್ಞಾತ ಸ್ಥಳದಲ್ಲಿ ಅಡಗಿಸಿಟ್ಟಿರುವುದೇಕೆ ಎಂದು ಪ್ರಶ್ನಿಸಿರುವ ಮೈತ್ರೇಯನ್, ಅನಾರೋಗ್ಯದಿಂದ ಬಳಲುತ್ತಿರುವ ಶಾಸಕರೊಬ್ಬರನ್ನು ಭೇಟಿ ಮಾಡಲು ಅವರ ಕುಟುಂಬಸ್ಥರಿಗೂ ಅವಕಾಶ ನೀಡಿಲ್ಲವೆಂದು ದೂರಿದ್ದಾರಲ್ಲದೆ ಹೈಫೈ ರೆಸಾರ್ಟ್ ಗಳಲ್ಲಿ ಶಾಸಕರನ್ನು ಒತ್ತೆಯಾಳಾಗಿರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಹುದ್ದೆಗಾಗಿ ಶಶಿಕಲಾ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...