alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಬಿಟ್ಟು ಸ್ಕೂಟರ್ ನಲ್ಲಿ ಹೋಗ್ತಾರೆ ಈ ಶಾಸಕರು

laxmi1

ಮೀರತ್ ಶಾಸಕ ಹಾಗೂ ಉತ್ತರ ಪ್ರದೇಶದ ಬಿಜೆಪಿ ಮಾಜಿ ಅಧ್ಯಕ್ಷ ಡಾ. ಲಕ್ಷ್ಮಿಕಾಂತ್ ಬಾಜ್ಪೇಯಿ ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಕಾರೇನೋ ಇದೆ. ಆದ್ರೆ ಅವರು ಈಗಲೂ ಸ್ಕೂಟರ್ ನಲ್ಲಿಯೇ ಸವಾರಿ ಮಾಡ್ತಾರೆ.

ಅವರಿಗೆ ಕಾರ್ ಗಿಂತ ಸ್ಕೂಟರ್ ಎಂದ್ರೆ ಪಂಚಪ್ರಾಣವಂತೆ. ಮೀರತ್ ಒಂದೇ ಅಲ್ಲ ಲಕ್ನೋದಲ್ಲಿ ಕೂಡ ಜನರ ಮಧ್ಯೆ ಸ್ಕೂಟರ್ ನಲ್ಲಿ ಪ್ರಯಾಣ ಬೆಳೆಸಿ ಅವರು ಚರ್ಚೆಗೆ ಬಂದಿದ್ದಾರೆ. ಸಭೆ, ಸಮಾರಂಭಗಳಿಗೆ ಹೋಗುವ ವೇಳೆ ತಮ್ಮ ಸ್ಕೂಟರ್ ನಲ್ಲಿ ಹೋಗ್ತಾರೆ ಲಕ್ಷ್ಮಿಕಾಂತ್. ಬಾಡಿಗಾರ್ಡ್ ನನ್ನು ಹಿಂದೆ ಕೂರಿಸಿಕೊಂಡು ತಾವೇ ಸ್ಕೂಟರ್ ಚಲಾಯಿಸ್ತಾರೆ ಲಕ್ಷ್ಮಿಕಾಂತ್. ಕೆಲವೊಮ್ಮೆ ಪಕ್ಷದ ಕಾರ್ಯಕರ್ತರು ಲಕ್ಷ್ಮಿಕಾಂತ್ ಸ್ಕೂಟರ್ ಹಿಂದಿರ್ತಾರೆ.

2012ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಅವರು ನೀಡಿದ ಆಸ್ತಿ ವಿವರದ ಪ್ರಕಾರ ಅವರ ಬಳಿ 1 ಕೋಟಿ 13 ಲಕ್ಷ 86 ಸಾವಿರದ 984 ರೂಪಾಯಿ ಆಸ್ತಿ ಇದೆ. ಇವರ ಹೆಸರಿನಲ್ಲೊಂದು ಸ್ಕೂಟರ್ ಸಹ ಇದೆ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...