alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶಾಸಕರ ಸಾಮಾನ್ಯ ಜ್ಞಾನ ಎಷ್ಟಿದೆ ನೋಡಿ….

pvsindhul4

ಹೈದ್ರಾಬಾದ್ ನ ಚಾರ್ಮಿನಾರ್ ನಲ್ಲಿ 5 ಕಿಮೀ ಮ್ಯಾರಥಾನ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ AIMIM ಶಾಸಕ ಮುಮ್ತಾಜ್ ಅಹ್ಮದ್ ಖಾನ್ ಅವರಿಗೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಯಾವ ವಿಭಾಗದ ಆಟಗಾರ್ತಿ ಅನ್ನೋದೇ ಗೊತ್ತಿರಲಿಲ್ಲ.

ಸಿಂಧು ಅವರನ್ನು ವಾಲಿಬಾಲ್ ಆಟಗಾರ್ತಿ ಅಂತಾ ಸಂಭೋದಿಸಿದ ಮುಮ್ತಾಜ್ ಅಹ್ಮದ್ ಖಾನ್, ಪ್ರೇಕ್ಷಕರೆದುರು ಮುಜಗರಕ್ಕೀಡಾದ್ರು. ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ವೇದಿಕೆಯ ಮೇಲಿದ್ದವರನ್ನೆಲ್ಲ ಸ್ವಾಗತಿಸಿದ್ರು. ಪಿವಿ ಸಿಂಧು ಅವರನ್ನು ನೋಡಿ ಗೊಂದಲಕ್ಕೀಡಾದ ಶಾಸಕರು, ಕೊನೆಗೆ ಹೈದ್ರಾಬಾದ್ನ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ವಾಲಿಬಾಲ್ ಆಟಗಾರ್ತಿ ಪಿವಿ ಸಿಂಧು ಎಂದುಬಿಟ್ರು.

ಆದ್ರೆ ಪಿವಿ ಸಿಂಧು ಮಾತ್ರ ಇದರಿಂದ ವಿಚಲಿತರಾಗಲಿಲ್ಲ, ನಗುನಗುತ್ತಲೇ ಆ ಪ್ರಮಾದವನ್ನು ಅಲಕ್ಷಿಸಿದ್ರು. ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು, ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅಂಥದ್ರಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಕನಿಷ್ಟ ಸಾಮಾನ್ಯ ಜ್ಞಾನವೂ  ಇಲ್ಲದ ಶಾಸಕರು ಈಗ ಟೀಕೆಗೆ ಗುರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...