alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ ಅವಿರೋಧ ಆಯ್ಕೆ

ಬರೋಬ್ಬರಿ 50 ವರ್ಷಗಳ ಬಳಿಕ ಡಿಎಂಕೆ ಪಕ್ಷಕ್ಕೆ ನೂತನ ಸಾರಥಿ ನೇಮಕವಾಗಿದೆ. ಎಂ.ಕೆ. ಸ್ಟಾಲಿನ್ ಡಿಎಂಕೆ ಪಕ್ಷದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

1969 ಜುಲೈ 29 ರಲ್ಲಿ ಕರುಣಾನಿಧಿ ಅವರು ಡಿಎಂಕೆ ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿ, ನಿಧನರಾಗುವವರೆಗೂ ಅಂದರೆ 49 ವರ್ಷಗಳ ದೀರ್ಘ‌ ಕಾಲ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದರು. ಇದೀಗ ಆ ಸ್ಥಾನಕ್ಕೆ ಅವರ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸ್ಟಾಲಿನ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 50 ವರ್ಷಗಳ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ತಮ್ಮ 14 ವರ್ಷದಲ್ಲೇ ತಂದೆಯ ಪರ ಪ್ರಚಾರ ಕೆಲಸದಲ್ಲಿ ಭಾಗಿಯಾಗುವ ಮೂಲಕ ಸ್ಟಾಲಿನ್ ರಾಜಕೀಯ ಜೀವನ ಪ್ರವೇಶಿಸಿದರು. ತಂದೆಯ ನೆರಳಿನಲ್ಲಿಯೇ ರಾಜಕೀಯ ಆರಂಭಿಸಿದ ಸ್ಟಾಲಿನ್​ಗೆ ಡಿಎಂಕೆ ಪಕ್ಷದಲ್ಲಿ ಕರುಣಾನಿಧಿ ಒಂದು ಸ್ಥಾನ ಕಲ್ಪಿಸಿದ್ದರು. ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬಿಂಬಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...