alex Certify
ಕನ್ನಡ ದುನಿಯಾ       Mobile App
       

Kannada Duniya

ಮೀ ಟೂ ಎಫೆಕ್ಟ್: ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ

ಸಹೋದ್ಯೋಗಿ ಪತ್ರಕರ್ತೆ ತಮ್ಮ ವಿರುದ್ದ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರೆಸಿದ ವೇಳೆ ರಾಜೀನಾಮೆ ನೀಡಲು ನಿರಾಕರಿಸಿದ್ದ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರ ಮಧ್ಯೆ, ಎಂ.ಜೆ. ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ‌ ಆರೋಪಿಸಿರುವ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತಯಾರಿ ನಡೆಸಿರುವ ಬೆನ್ನಲ್ಲೇ, ಮತ್ತೆ ಇಬ್ಬರು ಯುವತಿಯರು ಅಕ್ಬರ್ ವಿರುದ್ಧ ಆರೋಪಿಸಿದ್ದಾರೆ.

ಈಗಾಗಲೇ ಅನೇಕರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮೀಟೂ ಅಭಿಯಾನದ ಮೂಲಕ ಮಾಡಿದ್ದರು. ಇದೀಗ ಪತ್ರಕರ್ತೆ ತುಷಿತಾ ಪಾಟೀಲ್ ಮತ್ತೊಮ್ಮೆ ಆರೋಪ ಮಾಡಿದ್ದಾರೆ.

ತುಷಿತಾ ಅವರು ಮಾಡಿರುವ ಆರೋಪದಲ್ಲಿ, ಅವರು 22 ವರ್ಷವಿದ್ದಾಗ, ಇಂಟರ್ನ್ ಷಿಪ್ ಮಾಡುವ ವೇಳೆ ಅಕ್ಬರ್ ಅವರು, ಕೆಲಸದ ನೆಪದಲ್ಲಿ ಹೋಟೆಲ್ ಗೆ ಕರೆಸಿಕೊಂಡಿದ್ದರು. ಹೋಟೆಲ್ ಗೆ ಭೇಟಿ ನೀಡಿದಾಗ, ಕೇವಲ ಒಳ ಉಡುಪಿನಲ್ಲಿ‌ ಬಾಗಿಲು ತಗೆದಿದ್ದರು ಎಂದು ಆರೋಪಿಸಿದ್ದಾರೆ.

ಇದರೊಂದಿಗೆ ಉದ್ಯಮಿ‌‌ ಸ್ವಾತಿ ಗೌತಮಿ ಅವರು, ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಲು ತೆರಳಿದಾಗ‌‌ ಬಾತ್ ರೋಬ್ ನಲ್ಲಿ ಬಂದು ಬಾಗಿಲು ತೆಗೆದಿದ್ದರು. ಇದರೊಂದಿಗೆ ಮದ್ಯ ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...