alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯರಿಲ್ಲವೆಂದು ಶಸ್ತ್ರ ಚಿಕಿತ್ಸೆ ಮಾಡಿದ ಶಾಸಕ..!

sa-mla

ಐಜ್ವಾಲ್: ಆಸ್ಪತ್ರೆಯಲ್ಲಿ ತುರ್ತು ಅಗತ್ಯವಿದ್ದ ಗರ್ಭಿಣಿಗೆ, ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸುವ ಮೂಲಕ ಶಾಸಕರೊಬ್ಬರು ಗಮನ ಸೆಳೆದಿದ್ದಾರೆ.

ಮಿಜೋರಾಂ ಶಾಸಕ ಡಾ. ಕೆ. ಬಿಚುವಾ ಇಂತಹ ಕಾರ್ಯ ಮಾಡಿದವರು. 35 ವರ್ಷದ ಗರ್ಭಿಣಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆ ಆಸ್ಪತ್ರೆ ಸೇರಿದ್ದಾಳೆ.

ತಕ್ಷಣಕ್ಕೆ ಆಕೆಗೆ ಸರ್ಜರಿ ಮಾಡದಿದ್ದರೆ, ಜೀವಕ್ಕೆ ತೊದರೆಯಾಗುವ ಅಪಾಯವಿತ್ತು. ಆದರೆ, ಶಸ್ತ್ರ ಚಿಕಿತ್ಸೆ ಮಾಡಬೇಕಿದ್ದ ವೈದ್ಯರು ಹೊರಗೆ ಹೋಗಿದ್ದರು.

ಇದು ಶಾಸಕ ಬಿಚುವಾ ಗಮನಕ್ಕೆ ಬಂದಿದೆ. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ, ಆಸ್ಪತ್ರೆಗೆ ಧಾವಿಸಿ ಬಂದ ಅವರು ಶಸ್ತ್ರ ಚಿಕಿತ್ಸೆ ನೆರವೇರಿಸಿ ಮಹಿಳೆಯ ಪ್ರಾಣ ಕಾಪಾಡಿದ್ದಾರೆ.

ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಬಿಚುವಾ 38 ತಿಂಗಳ ಹಿಂದೆ ಮಿಜೋರಾಂ ನ್ಯಾಷನಲ್ ಫ್ರಂಟ್ ಶಾಸಕರಾಗಿದ್ದಾರೆ.

20 ವರ್ಷಗಳ ಕಾಲ ಅವರು ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಶಾಸಕರಾದ ಬಳಿಕ, ಮೊದಲ ಬಾರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿ ಗಮನ ಸೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...