alex Certify
ಕನ್ನಡ ದುನಿಯಾ       Mobile App
       

Kannada Duniya

ಅನ್ನಕ್ಕಾಗಿ ಅಲೆದಾಡುತ್ತಿದ್ದ ಸೋನಿಯಾ ಭದ್ರತಾ ಯೋಧ

ನವದೆಹಲಿ: ನಾಪತ್ತೆಯಾಗಿದ್ದ ಎಸ್.ಪಿ.ಜಿ. ಯೋಧ ರಾಕೇಶ್ ಕುಮಾರ್ ವರ್ಮಾ ಪತ್ತೆಯಾಗಿದ್ದಾರೆ. ಅನ್ನ, ನೀರಿಗಾಗಿ ಅಲೆದಾಡುತ್ತಿದ್ದ ದಯನೀಯ ಸ್ಥಿತಿಯಲ್ಲಿ ಅವರು ಕಂಡು ಬಂದಿದ್ದಾರೆ.

31 ರ ಹರೆಯದ ರಾಕೇಶ್ ಕುಮಾರ್ ವರ್ಮಾ ಅವರು, ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 1 ವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.

ಅವರಿಗಾಗಿ ಹುಡುಕಾಟ ನಡೆಸಿ, ಕುಟುಂಬದವರು ಸೆಪ್ಟಂಬರ್ 3 ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ನಾಪತ್ತೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.

ವಿಪರೀತ ಸಾಲ ಮಾಡಿಕೊಂಡಿದ್ದ ವರ್ಮಾ ಸಾಲ ತೀರಿಸದೇ ಒತ್ತಡಕ್ಕೆ ಒಳಗಾಗಿದ್ದಾರೆ. ಆಗಸ್ಟ್ 31 ರಂದು ಸಾಲದ ಕಂತು 40,000 ರೂ. ಪಾವತಿಸಬೇಕಿತ್ತಾದರೂ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆರ್ಥಿಕ ಕಾರಣದಿಂದ ಮನೆ ಬಿಟ್ಟು ಹೋಗಿದ್ದಾರೆ.

ದೆಹಲಿಯ ವಿವಿಧ ಕಡೆಗಳಲ್ಲಿ 4 -5 ದಿನ ಅಲೆದಾಡಿದ ಅವರು ಅನ್ನ, ನೀರಿಗಾಗಿ ಬೇಡಿದ್ದಾರೆ. ಅವರ ಬಳಿ ಎಸ್.ಪಿ.ಜಿ. ಗುರುತಿನ ಚೀಟಿ ಇರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ವರ್ಮಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ತೀವ್ರ ಬಳಲಿದ್ದ ಅವರು ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...