alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲೂಟದ ರುಚಿಗೆ ಮನಸೋತವನು ಬೈಕ್‌ ಕದ್ದು ಮತ್ತೆ ಜೈಲು ಪಾಲು

ಜೈಲೂಟ ಹಾಗೂ ಸಹಖೈದಿಗಳ ಸಂಗವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದ ಕಾರಣ ಚೆನ್ನೈನ 52 ವರ್ಷದ ವ್ಯಕ್ತಿಯೊಬ್ಬ, ತನ್ನ ಕಾರಾಗೃಹ ಶಿಕ್ಷೆ ಅವಧಿ ಮುಗಿದ ಕೂಡಲೇ, ಬೈಕ್‌ ಕದ್ದು ಬೇಕಂತಲೇ ಮತ್ತೆ ಜೈಲು ಸೇರಿದ್ದಾನೆ…!

ಕಳೆದ ಮಾರ್ಚ್‌‌ನಲ್ಲಿ ಮೂರು ತಿಂಗಳ ಮಟ್ಟಿಗೆ ಜೈಲು ಶಿಕ್ಷೆಗೆ ಗುರಿಯಾಗಿ ಜೂನ್‌ 29 ರಂದು ಬಿಡುಗಡೆಯಾಗಿದ್ದ ಜ್ಞಾನಪ್ರಕಾಶಂ ಮತ್ತೆ ಜೈಲಿಗೆ ಹೋಗಬೇಕೆಂದು, CC TV ಕ್ಯಾಮೆರಾಗಳು ಇದ್ದ ಪ್ರದೇಶದಲ್ಲಿ ತನ್ನ ಮುಖವನ್ನು ಸ್ಪಷ್ಟವಾಗಿ ತೋರಿಸಿ ಬೈಕೊಂದನ್ನು ಕದ್ದಿದ್ದಾನೆ.

ಮನೆಯಲ್ಲಿ ಕುಟುಂಬದವರಿಗಿಂತ ಜೈಲಿನಲ್ಲೇ ತನಗೆ ಚೆನ್ನಾಗಿ ನೋಡಿಕೊಳ್ಳುತ್ತಿರುವುದಾಗಿ ಈತ ಹೇಳಿಕೊಂಡಿದ್ದು, ಆತನಿಗೆ ಆಹಾರ, ಸೂರು ಹಾಗು ಸ್ನೇಹಿತರ ಸಂಗಡಕ್ಕಾಗಿ ಜೈಲೇ ಆಶ್ರಯವಾಗಿದೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...