alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನದೇ ಅಪಹರಣದ ಕಟ್ಟುಕತೆ ಕಟ್ಟಿದ ಸುಂದರಿ !

shipra

ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಸ್ನ್ಯಾಪ್ ಡೀಲ್ ಉದ್ಯೋಗಿಯೊಬ್ಬರನ್ನು ಶಾರುಖ್ ಖಾನ್ ಅಭಿನಯದ ‘ಡರ್’ ಸಿನೆಮಾ ಸ್ಟೈಲ್ ನಲ್ಲಿ ಅಪಹರಿಸಲಾಗಿತ್ತು. ಅದೇ ರೀತಿ ಫ್ಯಾಷನ್ ಡಿಸೈನರ್ ಒಬ್ಬರನ್ನು ಅಪಹರಿಸಿದ ಘಟನೆ ತಲ್ಲಣ ಮೂಡಿಸಿತ್ತು.

4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಫ್ಯಾಷನ್ ಡಿಸೈನರ್ ಶಿಪ್ರಾ ಮಲಿಕ್, ಗುರ್ ಗಾಂವ್ ಸಮೀಪದ ಸುಲ್ತಾನ್ ಪುರಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಶಿಪ್ರಾ ಮಲಿಕ್ ಬ್ಯೂಟಿಕ್ ಶಾಪ್ ನಡೆಸುತ್ತಿದ್ದು, ಅವರಿಗೆ ಮದುವೆಯಾಗಿದ್ದು 1 ತಿಂಗಳ ಮಗು ಇದೆ. ನೋಯ್ಡಾದಿಂದ ದೆಹಲಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದರು. ಬಳಿಕ 4 ದಿನಗಳ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ಅವರನ್ನು ಇಟ್ಟು ವಾಸ್ತವ್ಯ ಬದಲಿಸಿದ್ದರು ಎಂದು ಆಕೆ ಹೇಳಿಕೊಂಡಿದ್ದಳು.

ಪೊಲೀಸ್ ಕೇಸ್ ದಾಖಲಾಗಿ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದುಷ್ಕರ್ಮಿಗಳು ಶಿಪ್ರಾ ಮಲಿಕ್ ಅವರನ್ನು ಸುಲ್ತಾನ್ ಪುರ್ ಹಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ತೀವ್ರ ಬಳಲಿದ್ದ ಶಿಪ್ರಾ ಅವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಳೆದ 15 ದಿನಗಳ ಅವಧಿಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಆದರೆ, ಶಿಪ್ರಾ ಮಲಿಕ್ ಅವರದು ಅಪಹರಣವಲ್ಲ, ಬದಲಿಗೆ ಇದು ಆಕೆಯೇ ಹೇಳಿದ ಕಟ್ಟುಕತೆ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ. ಕ್ರೈಂ ಶೋವೊಂದರ ಪ್ರೇರೇಪಣೆಯಿಂದ ಹೀಗೆ ಮಾಡಿದ್ದಾಗಿ ಸುಂದರಿ ಶಿಪ್ರಾ ತಿಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...