alex Certify
ಕನ್ನಡ ದುನಿಯಾ       Mobile App
       

Kannada Duniya

40 ವರ್ಷಗಳ ಬಳಿಕ ಯುಟ್ಯೂಬ್ ನಿಂದಾಗಿ ಪತ್ತೆಯಾಗಿದ್ದಾನೆ ಈ ವ್ಯಕ್ತಿ

1978ರಲ್ಲಿ ಕೋಮ್ದಾನ್ ಸಿಂಗ್ ಎಂಬಾತ 26 ವರ್ಷವಾಗಿದ್ದಾಗ, ಮಣಿಪುರದಿಂದ ಕಾಣೆಯಾಗಿದ್ದ. ಕುಟುಂಬದವರು ಎಷ್ಟೇ ಹುಡುಕಿದರೂ ಆತ ಪತ್ತೆಯಾಗಿರಲಿಲ್ಲ. ಇತ್ತೀಚಿಗೆ ಮುಂಬೈ ನಗರದ ಬೀದಿಗಳಲ್ಲಿ ಸಿಂಗ್ ಹಾಡು ಹಾಡುತ್ತಿದ್ದ ವಿಡಿಯೋ ಕ್ಲಿಪ್ ಅನ್ನು ಮುಂಬೈ ಪೋಟೋಗ್ರಾಫರ್ ಫಿರೋಜ್ ಶಕೀರ್ ಎಂಬುವವರು ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಡಿಯೋವನ್ನು ನೋಡಿದ ಸಿಂಗ್ ಕುಟುಂಬದವರು ಇಂಫಾಲ್ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆ ಬಳಿಕ ಪೊಲೀಸರೊಂದಿಗೆ ಸೇರಿ ಹುಡುಕಲಾಗಿ, ಇದೀಗ 40 ವರ್ಷಗಳಿಂದ ಕಾಣೆಯಾಗಿದ್ದ ಸಿಂಗ್ ಮತ್ತೆ ಮರಳಿ ಗೂಡು ಸೇರುತ್ತಿದ್ದಾರೆ.

ಸಹೋದರರೊಂದಿಗಿನ ಮನಸ್ತಾಪದ ಕಾರಣಕ್ಕೆ ಕೋಮ್ದಾನ್ ಸಿಂಗ್ ಮನೆ ಬಿಟ್ಟು ಬಂದಿದ್ದರೆನ್ನಲಾಗಿದ್ದು, ಯೂ ಟ್ಯೂಬ್ ನಲ್ಲಿದ್ದ ವಿಡಿಯೋ ನೋಡಿದವರೊಬ್ಬರು ಸಿಂಗ್ ಕುಟುಂಬಕ್ಕೆ ನೀಡಿದ ಮಾಹಿತಿ ಮೇರೆಗೆ ಕಡೆಗೂ 40 ವರ್ಷದ ಬಳಿಕ ಪತ್ತೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...