alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದ ಬಾಲಕ 3 ದಿನಗಳ ಬಳಿಕ ನೀರಿನ ಟ್ಯಾಂಕ್ ನಲ್ಲಿ ಪತ್ತೆ

BOY

ಪುಣೆ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 9 ವರ್ಷದ ಬಾಲಕನೊಬ್ಬ ಖಾಲಿ ನೀರಿನ ಟ್ಯಾಂಕ್ ನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಹಸಿವು, ನೀರಡಿಕೆಗಳಿಂದ ಬಾಲಕ ಬಳಲಿದ್ದು, ಆತನಿಗೆ ಚಿಕಿತ್ಸೆ ನೀಡಲಾಗಿದೆ.

ಪುಣೆಯಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್ 8 ರಂದು ಭವಾನಿ ಪೇಟ್ ಏರಿಯಾದಿಂದ ಸಂಜೆ 7 ಗಂಟೆ ಸುಮಾರಿಗೆ ಫಯಾಜ್ ಮುಲ್ತಾನಿ ಎಂಬ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಿದ ಪೋಷಕರು ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ಶುಕ್ರವಾರದಂದು ಅದೇ ಏರಿಯಾದಲ್ಲಿದ್ದ ಮುನ್ಸಿಪಲ್ ಶಾಲೆಯಲ್ಲಿನ ಖಾಲಿಯಾಗಿದ್ದ ನೀರಿನ ಟ್ಯಾಂಕ್ ನಲ್ಲಿ ಬಾಲಕ ಇರುವುದನ್ನು ಗಮನಿಸಿದ ಶಿಕ್ಷಕರೊಬ್ಬರು ಆತನನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಕಾಲ ಬಾಲಕ ಟ್ಯಾಂಕ್ ಒಳಗಿದ್ದರೂ ಯಾರೂ ಗಮನಿಸಿಲ್ಲವೆನ್ನಲಾಗಿದೆ. ಭಾಂಗ್ ಮಿಶ್ರಿತ ಪದಾರ್ಥ ಸೇವಿಸಿದ್ದ ಬಾಲಕ ಮತ್ತಿನಲ್ಲಿ ನೀರಿನ ಟ್ಯಾಂಕ್ ಒಳಗೆ ಹೋಗಿರಬಹುದೆಂದು ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...