alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದೆ ಈ ಕುಟುಂಬ

ಮಳೆ, ಪ್ರವಾಹದಿಂದ ಮುಳುಗಿದ ಕಾರಿನಲ್ಲಿದ್ದ ಕುಟುಂಬವೊಂದನ್ನು ರಕ್ಷಣಾ ತಂಡಗಳು ನವಿ ಮುಂಬೈನಲ್ಲಿ ಬಚಾವ್‌ ಮಾಡಿದೆ. ರಕ್ಷಣಾ ಕಾರ್ಯದ ಸಂಪೂರ್ಣ ವಿಡಿಯೋ ಇದೀಗ ವೈರಲ್‌ ಆಗಿದ್ದು, ಕಾರ್ಯಾಚರಣೆಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ.

ನವಿ ಮುಂಬಯಿಯ ತಲೋಜದಲ್ಲಿ ಪ್ರವಾಹಕ್ಕೆ ಕಾರು ಸಂಪೂರ್ಣ ಮುಳುಗಡೆಯಾಗಿದ್ದು, ಕುಟುಂಬವೊಂದು ಕಾರಿನ ಮೇಲ್ಬಾಗದಲ್ಲಿ ಕುಳಿತು ರಕ್ಷಣೆಗೆ ಕೂಗಿದ್ದಾರೆ. ಅಶ್ರಫ್‌ ಖಲೀಲ್‌ ಶೇಖ್‌, ಅವರ ಪತ್ನಿ ಹಮೀದಾ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರ ಸಹಾಯದಿಂದ ರಕ್ಷಣಾ ತಂಡಗಳು ಕಾಪಾಡಿವೆ.

ತಲೋಜದ ಘೋಟ್ಗಾಂವ್‌ ಪ್ರದೇಶದಲ್ಲಿನ ಸೇತುವೆಯ ಮೇಲೆ ಕಾರು ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿ, ನದಿಗೆ ಬಿದ್ದಿದೆ. ಅದೃಷ್ಟವಶಾತ್‌ ಕಲ್ಲಿಗೆ ಸಿಲುಕಿ ಕಾರು ಸಂಪೂರ್ಣ ಮುಳುಗಿಲ್ಲ. ಆದರೆ ಮಳೆ ಹೆಚ್ಚಾಗುತ್ತಿದ್ದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿತ್ತು. ಸ್ಥಳೀಯರು ಮೊದಲು ಇಬ್ಬರು ಮಕ್ಕಳು ಹಾಗೂ ಮಹಿಳೆಯರನ್ನು ರಕ್ಷಿಸಿದ್ದಾರೆ. ಆ ಬಳಿಕ ಅಶ್ರಫ್‌ ಅವರನ್ನು ರಕ್ಷಣೆ ಮಾಡಲಾಗಿದೆ. ಈ ಸನ್ನಿವೇಶದ ಸಂಪೂರ್ಣ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಕುಟುಂಬದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮನೆ ತಲುಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...