alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಬಸ್ ಪ್ರಯಾಣಿಕರು

miraculous-escape-for-ksrtc-passengers-above-1000-feet-gorge-in-thamarasseryನಿದ್ರೆಯ ಮಂಪರಿನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ಘಾಟ್ ನ ತಿರುವಿನಲ್ಲಿ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿದ್ದು, ಸುಮಾರು 1000 ಅಡಿ ಆಳದ ಕಣಿವೆಗೆ ಉರುಳುವ ಅಂಚಿನಲ್ಲಿದ್ದ ಬಸ್ ಅದೃಷ್ಟವಶಾತ್ ತಡೆಗೋಡೆ ಕಾರಣಕ್ಕೆ ನಿಂತಿದೆ. ಇದರಿಂದಾಗಿ ಬಸ್ ನಲ್ಲಿದ್ದ 20 ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಸ್ ತೋಡುಪುಜದಿಂದ ವೈನಾಡ್ ಗೆ ತೆರಳುತ್ತಿದ್ದು, ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಾಟಿಯ ತಿರುವಿನಲ್ಲಿ ನಿದ್ರೆಯ ಮಂಪರಿನಲ್ಲಿದ್ದ ಚಾಲಕ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿದ್ದಾನೆ. ಬಸ್ ನ ಒಂದು ಭಾಗ ಸಂಪೂರ್ಣವಾಗಿ ಮೇಲೆದ್ದಿದ್ದು, ಚಾಲಕ ಹಾಗೂ ಕಂಡಕ್ಟರ್ ಸಮೇತ ಪ್ರಯಾಣಿಕರೆಲ್ಲರೂ ಕೂಡಲೇ ಬಸ್ ನಿಂದ ಕೆಳಗಿಳಿದಿದ್ದಾರೆ.

ಚಾಲಕನಿಗೆ ವಿಶ್ರಾಂತಿ ನೀಡದೆ ದೂರದ ಟ್ರಿಪ್ ಗೆ ಕಳುಹಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದ್ದು, ಪ್ರಯಾಣಿಕರ ಪ್ರಾಣವನ್ನು ಪಣಕ್ಕಿಟ್ಟ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಬಸ್ ತೆರವುಗೊಳಿಸಿ ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...