alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ ! ಗಿರಗಿರ ತಿರುಗುತ್ತಿದೆ ಬೇವಿನ ಗಿಡ..!!

gida

ಹೈದರಾಬಾದ್: ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಅಚ್ಚರಿಯ ಘಟನೆಯೊಂದರ ವರದಿ ಇಲ್ಲಿದೆ.

ತೆಲಂಗಾಣದ ಕರೀಂನಗರ ಜಿಲ್ಲೆಯ, ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯಲ್ಲಿ ಮನೆಯೊಂದರ ಎದುರು ಇರುವ ಬೇವಿನ ಗಿಡ ಗಿರಗಿರನೆ ತಿರುಗುತ್ತಿದೆ. ಹೀಗೆ ಬೇವಿನ ಗಿಡ ತಿರುಗುವುದನ್ನು ನೋಡಲು ಜನಜಾತ್ರೆಯೇ ನೆರೆದಿದ್ದು, ನೋಡುಗರನ್ನು ಚಕಿತಗೊಳಿಸಿದೆ. ಇದು ದೇವರ ಪವಾಡ ಇರಬಹುದೆಂದು ನಂಬಿದ ಇಲ್ಲಿನ ಜನ ಪೂಜೆ- ಪುನಸ್ಕಾರ ಮಾಡಿದ್ದಾರೆ. ಕಳೆದ 2 ದಿನಗಳಿಂದ ಬೇವಿನ ಗಿಡ ನಿರಂತರವಾಗಿ ತಿರುಗುತ್ತಿದೆ.

ತನ್ನಿಂತಾನೇ ತಿರುಗುತ್ತಿರುವ ಈ ಬೇವಿನಗಿಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಭೂಮಿಯಲ್ಲಿನ ಚಲನೆಯಿಂದ ಈ ರೀತಿ ಆಗಿರಬಹುದೆಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...