alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಮೇಲೆ ರೈಲು ಚಲಿಸಿದ್ರೂ ಬದುಕಿ ಬಂದ ಪ್ರಯಾಣಿಕ

train-1

ಮಧ್ಯಪ್ರದೇಶದ ಸತ್ನಾದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಮೈಮೇಲೆ ಗೂಡ್ಸ್ ರೈಲು ಹರಿದ್ರೂ ವ್ಯಕ್ತಿಯೊಬ್ಬ ಪಾರಾಗಿ ಬಂದಿದ್ದಾನೆ. ಜವಾಹರ್ ನಗರ್ ನಿವಾಸಿಯಾಗಿರೋ ರಾಧೇಶ್ಯಾಮ್ ಎರಡು ಪ್ಲಾಟ್ ಫಾರ್ಮ್ ಮಧ್ಯೆ ಇರೋ ಹಳಿ ದಾಟುತ್ತಿದ್ದ.

ದಿಢೀರನೆ ರೈಲು ಹೊರಟು ಬಿಟ್ಟಿದೆ. ಬೇರೆ ವಿಧಿಯಿಲ್ಲದೆ ಆತ ಹಳಿಗಳ ಮೇಲೆ ಮಲಗಿಬಿಟ್ಟ. ಸುಮಾರು 3 ನಿಮಿಷಗಳ ಕಾಲ ಗೂಡ್ಸ್ ರೈಲು ಆತನ ಮೈಮೇಲೆ ಚಲಿಸಿದೆ. ಸುತ್ತ ನಿಂತಿದ್ದವರೆಲ್ಲ ಗಾಬರಿಯಾಗಿದ್ರು, ರೈಲಿನಡಿ ಸಿಲುಕಿ ಆತ ಅಪ್ಪಚ್ಚಿಯಾಗಿರಬಹುದೆಂದೇ ಭಾವಿಸಿದ್ರು.

ಆದ್ರೆ ರಾಧೇಶ್ಯಾಮ್ ಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ರೈಲು ಮುಂದಕ್ಕೆ ಚಲಿಸಿದ ಮೇಲೆ ಆತ ಆರಾಮಾಗಿ ಅಲ್ಲಿಂದ ಎದ್ದು ಬಂದಿದ್ದಾನೆ. ದೇವರ ದಯೆಯಿಂದ ತಾನು ಪಾರಾಗಿ ಬಂದಿದ್ದೇನೆ ಎನ್ನುತ್ತಾನೆ ರಾಧೇಶ್ಯಾಮ್. ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿರುವ ಪ್ರಯಾಣಿಕರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...