alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾಧಿಯಲ್ಲಿಡುತ್ತಿದ್ದಂತೆ ಕಣ್ಣು ಬಿಟ್ಟಿದೆ ಉಸಿರು ನಿಲ್ಲಿಸಿದ್ದ ಮಗು

ಗ್ವಾಲಿಯರ್ ನಲ್ಲಿ ಚಮತ್ಕಾರವೊಂದು ನಡೆದಿದೆ. ಮಣ್ಣು ಮಾಡುವ ಸಂದರ್ಭದಲ್ಲಿ ಮೃತ ಮಗುವಿಗೆ ಮತ್ತೆ ಜೀವ ಬಂದಿದೆ. ಶಿವಂ ದ್ವಿವೇದಿ ಹಾಗೂ ಸ್ವಾತಿ ದಂಪತಿಗೆ ನವೆಂಬರ್ 13ರಂದು ಹೆಣ್ಣು ಮಗು ಜನಿಸಿತ್ತು. ಜನವರಿ 1ರಂದು ಮಗುವಿಗೆ ನೆಗಡಿ ಶುರುವಾಗಿದೆ.

ದಿನೇ ದಿನೇ ಶಿಶುವಿನ ಸ್ಥಿತಿ ಬಿಗಡಾಯಿಸಿತ್ತು. ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಬಳಿಕ ಮಗುವನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಮಗುವಿನ ಸ್ಥಿತಿ ಸುಧಾರಿಸಿರಲಿಲ್ಲ, ಆದ್ರೂ  ದಂಪತಿ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಕರೆತಂದಿದ್ದಾರೆ.

ಅಷ್ಟರಲ್ಲಿ ಮಗುವಿನ ಉಸಿರಾಟವೂ ನಿಂತಿತ್ತು. ದೇಹದಲ್ಲಿ ಚಲನೆಯೇ ಇರಲಿಲ್ಲ. ಮಗು ಸತ್ತಿದೆ ಎಂದುಕೊಂಡು ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ದಿದ್ದಾರೆ. ಮಗುವನ್ನು ಹೂಳಲು ಸಮಾಧಿಯಲ್ಲಿ ಇಡುತ್ತಿದ್ದಂತೆ ಅದು ಕಣ್ಣು ಬಿಟ್ಟಿದೆ, ಕೈಕಾಲು ಅಲ್ಲಾಡಿಸಿದೆ.

ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಮೆದುಳು ಜ್ವರದಿಂದ ಬಳಲುತ್ತಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಎಚ್ಚರಿಕೆ ನೀಡಿದ್ದರೂ ಕಿವಿಗೆ ಹಾಕಿಕೊಳ್ಳದೇ ಕುಟುಂಬಸ್ಥರು ಡಿಸ್ಚಾರ್ಜ್ ಮಾಡಿ ಕರೆದೊಯ್ದಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...