alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಮರುಕ್ಷಣದಲ್ಲೇ ವಧು ಮಾಡಿದ್ದೇನು..?

kerl-maduve

ಗುರುವಾಯೂರ್: ಕೇರಳದ ಪ್ರಸಿದ್ಧ ದೇವಾಲಯವಾಗಿರುವ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ಮದುವೆ ಮಾಡಿದರೆ, ದಂಪತಿ ಅನ್ಯೋನ್ಯವಾಗಿರುತ್ತಾರೆ ಎಂಬ ನಂಬಿಕೆ ಇದೆ.

ಆದರೆ, ಇತ್ತೀಚೆಗೆ ಅತಿ ಕಡಿಮೆ ಅವಧಿಯ ಮದುವೆಯೊಂದು ನಡೆದಿದೆ. ಗುರುವಾಯೂರು ದೇವಾಲಯದಲ್ಲಿ ಬಂಧು, ಬಾಂಧವರೆಲ್ಲರ ಸಮ್ಮುಖದಲ್ಲಿ ಮದುವೆಯೊಂದು ನಡೆದಿದೆ.

ಕಂಗೊಳಿಸುತ್ತಿದ್ದ ಮದುಮಕ್ಕಳನ್ನು ಎಲ್ಲರೂ ಹಾರೈಸಿದ್ದಾರೆ. ಆದರೆ, ಅಲ್ಲಿಗೆ ವಧುವಿನ ಪ್ರಿಯಕರ ಎಂಟ್ರಿ ಕೊಟ್ಟಿದ್ದೇ ತಡ ಚಿತ್ರಣವೇ ಬದಲಾಗಿದೆ.

ಆಗ ತಾನೇ ತಾಳಿ ಕಟ್ಟಿಸಿಕೊಂಡಿದ್ದ ವಧು, ತಾಳಿಯನ್ನು ವರನ ಕೈಗೆ ಕೊಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ.

ವಧು, ವರರ ಕಡೆಯವರ ನಡುವೆ ಜಗಳವಾಗಿ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ವಧುವಿನ ಕಡೆಯವರು 8 ಲಕ್ಷ ರೂ. ಕೊಡುವಂತೆ ಹಿರಿಯರು ತಿಳಿಸಿದ್ದಾರೆ.

ತಾನು ಪ್ರಿಯಕರನೊಂದಿಗೆ ಇರುವುದಾಗಿ ಪೊಲೀಸರಿಗೆ ವಧು ತಿಳಿಸಿದ್ದಾಳೆ. ಅಲ್ಲಿಗೆ ತಾಳಿ ಕಟ್ಟಿದ ಮರುಗಳಿಗೆಯಲ್ಲೇ ಮದುವೆ ಮುರಿದು ಬಿದ್ದಿದೆ.

ಇಷ್ಟೆಲ್ಲಾ ಆದರೂ ಬೇಸರಿಸಿಕೊಳ್ಳದ ವರ ತನ್ನ ಕುಟುಂಬದವರೊಂದಿಗೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾನೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...