alex Certify
ಕನ್ನಡ ದುನಿಯಾ       Mobile App
       

Kannada Duniya

“ಅಪ್ರಾಪ್ತೆ ಒಪ್ಪಿಗೆ ಪಡೆದು ಸಂಬಂಧ ಬೆಳೆಸಿದ್ರೂ ಅದು ಅತ್ಯಾಚಾರ’’

ಅಪ್ರಾಪ್ತರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತೆ ಒಪ್ಪಿಗೆ ಪಡೆದು ಸಂಬಂಧ ಬೆಳೆಸಿದ್ರೂ ಅದೂ ಅತ್ಯಾಚಾರವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾ ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ.

ಅಪ್ರಾಪ್ತೆ ಒಪ್ಪಿಗೆ ಮೇಲೆ ಸೆಕ್ಸ್ ನಡೆದಿದೆ. ಹುಡುಗಿ ದೇಹದ ಮೇಲೆ ಯಾವುದೇ ಗಾಯದ ಗುರುತಿಲ್ಲ. ಹಾಗೆ ಘಟನೆ ನಡೆದ ತಕ್ಷಣ ಹುಡುಗಿ ಯಾವುದೇ ಮಾಹಿತಿ ನೀಡಿಲ್ಲ. ಇವೆಲ್ಲವೂ ಒಪ್ಪಿಗೆ ಸೆಕ್ಸ್ ಎಂಬುದಕ್ಕೆ ಸಾಕ್ಷಿಯೆಂದು ಸೆಷನ್ಸ್ ಕೋರ್ಟ್ ತೀರ್ಪು ನೀಡಿತ್ತು.

2014 ರಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅದ್ರ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್, ಹುಡುಗಿ 14 ವರ್ಷದಲ್ಲಿರುವಾಗ ಸಂಬಂಧ ಬೆಳೆಸಿದ್ದಾಳೆ. ಆಕೆ ಒಪ್ಪಿಗೆ ಇಲ್ಲಿ ಮಹತ್ವ ಪಡೆಯುವುದಿಲ್ಲ. ಅಪ್ರಾಪ್ತ ವಯಸ್ಸಿನಲ್ಲಿ ಒಪ್ಪಿಗೆ ಮೇಲೆ ನಡೆದ ಸೆಕ್ಸ್ ಕೂಡ ಅತ್ಯಾಚಾರವಾಗುತ್ತದೆ ಎಂದು ಕೋರ್ಟ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...