alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನ ಮಗುವಿಗೆ ತಾಯಿಯಾದ ಅಪ್ರಾಪ್ತೆ

ಶಿಕ್ಷಕನೊಬ್ಬನ ಕಾಮುಕತೆ ಡಿಎನ್ಎ ವರದಿಯಿಂದ ಹೊರ ಬಿದ್ದಿದೆ. ಶಿಕ್ಷಕನ ಮಗುವಿಗೆ ಅಪ್ರಾಪ್ತೆ ತಾಯಿಯಾಗಿದ್ದಾಳೆ. ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕರಣ ನಡೆದಿದ್ದು, ವರದಿ ಈಗ ಬಂದಿದೆ.

ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ. ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸೆಪ್ಟೆಂಬರ್ 10,2017 ರಂದು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಹೆರಿಗೆ ನಂತ್ರ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಮಗುವಿಗೆ ತಂದೆ ಶಿಕ್ಷಕನೆಂದು ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಳು. ಆಕೆ ಹೇಳಿಕೆ ಮೇರೆಗೆ ಶಿಕ್ಷಕನನ್ನು ಆಗ್ಲೆ ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ಶಿಕ್ಷಕನ ಡಿಎನ್ಎ ಪರೀಕ್ಷೆ ನಡೆದಿತ್ತು. ಅದ್ರ ವರದಿ ಶನಿವಾರ ಬಂದಿದೆ. ವರದಿಯಲ್ಲಿ ಮಗುವಿನ ತಂದೆ ಶಿಕ್ಷಕ ಎಂಬುದು ಬಹಿರಂಗವಾಗಿದೆ. ವಿದ್ಯಾರ್ಥಿನಿ ಮಗು ಜತೆ ತಂದೆ-ತಾಯಿ ಮನೆಯಲ್ಲಿದ್ದಾಳೆ. ಘಟನೆ ನಂತ್ರ ಶಾಲೆಗೆ ಸಿಸಿ ಟಿವಿ ಅಳವಡಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದರು. ಆದ್ರೆ ಈವರೆಗೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...