alex Certify
ಕನ್ನಡ ದುನಿಯಾ       Mobile App
       

Kannada Duniya

ಜನ್ಮ ನೀಡ್ತಿದ್ದಂತೆ 2ನೇ ಮಹಡಿಯಿಂದ ಕೆಳಗೆಸೆದ್ಲು….ಆದ್ರೆ

?????????????????????????????????

ಅಪ್ರಾಪ್ತ ಬಾಲಕಿಯೊಬ್ಬಳು ನಾಚಿಕೆಗೇಡಿ ಕೆಲಸ ಮಾಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ಬಾಲಕಿ ಎರಡನೇ ಅಂತಸ್ತಿನಿಂದ ಮಗುವನ್ನು ಕೆಳಗೆಸೆದಿದ್ದಾಳೆ. ಆದ್ರೆ ಅದ್ರ ನಂತ್ರ ನಡೆದ ಘಟನೆಯನ್ನು ಚಮತ್ಕಾರವೆಂದ್ರೆ ತಪ್ಪಾಗಲಾರದು.

ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ನಗರದ ಐಷಾರಾಮಿ ಕಾಲೋನಿಯೊಂದರಲ್ಲಿ ವಾಸವಾಗಿದ್ದಾನೆ. ಆತನ ಮನೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಕೆಲಸ ಮಾಡ್ತಿದ್ದಾಳೆ. ಮಂಗಳವಾರ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಮಗುವನ್ನು ಇಟ್ಟುಕೊಳ್ಳಲು ಸಾಧ್ಯವಾಗದ ಬಾಲಕಿ ಎರಡನೇ ಮಹಡಿಯಿಂದ ಶಿಶುವನ್ನು ಕೆಳಗೆಸೆದಿದ್ದಾಳೆ. ಅಪಾರ್ಟ್ ಮೆಂಟ್ ಕೆಳಗಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಮಗು ಅಳುವ ಶಬ್ದ ಕೇಳಿದೆ. ತಕ್ಷಣ ಪೊಲೀಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಗಾರ್ಡ್. ವಿಚಾರಣೆ ನಡೆಸಿದಾಗ ಮಗು ಬಾಲಕಿಯದು ಎನ್ನುವ ವಿಷ್ಯ ಹೊರಬಿದ್ದಿದೆ. ಪಕ್ಕದ ಊರಿನಲ್ಲಿರುವ ಯುವಕನನ್ನು ಪ್ರೀತಿಸುತ್ತಿದ್ದೇನೆ. ಇದು ಆತನ ಮಗು ಎಂದಿದ್ದಾಳೆ ಬಾಲಕಿ. ಸದ್ಯ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಆರೋಗ್ಯವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...