alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕನಿಂದ ತಪ್ಪಿಸಿಕೊಳ್ಳಲು ಬಾಲಕಿಯರು ಮಾಡಿದ್ದಾರೆ ಇಂಥ ಸಾಹಸ

revenue-collection-vs-child-rape

ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೊಳಗಾದ ಇಬ್ಬರು ಬಾಲಕಿಯರು ಆತನಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 24 ವರ್ಷದ ಪಂಕಜ್ ಕುಮಾರ್ ಬಾಲಕಿಯರ ಮೇಲೆ ಕಣ್ಣು ಹಾಕಿದ್ದ. 8 ಹಾಗೂ 6 ವರ್ಷದ ಬಾಲಕಿಗೆ 100 ರೂಪಾಯಿ ಕೊಟ್ಟು ಅಂಗಡಿಯಿಂದ ಇನೋ ತರುವಂತೆ ಕಳಿಸಿದ್ದ.

ಇನೋ ಸಿಗದೇ ಇಬ್ಬರೂ ವಾಪಸ್ ಬಂದಿದ್ರು. ನಂತರ ತಾನೇ ಅವರನ್ನು ಮತ್ತೊಂದು ಅಂಗಡಿಗೆ ಕರೆದೊಯ್ದ. ಅಲ್ಲಿ ಬಾಲಕಿಯರಿಗೆ ಚಾಕಲೇಟ್ ಕೊಡಿಸಿ, ಅವರನ್ನು ಹತ್ತಿರದ ಪಾರ್ಕ್ ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಹೊಡೆದು ಹಿಂಸಿಸಿದ್ದಾನೆ.

ಬಾಲಕಿಯರು ಕೂಗಿಕೊಳ್ತಿದ್ದಂತೆ ಅವರ ಕತ್ತು ಹಿಸುಕಿದ್ದಾನೆ. ಅವನಿಂದ ತಪ್ಪಿಸಿಕೊಳ್ಳಲು ಬಾಲಕಿಯರು ಸತ್ತಂತೆ ನಾಟಕ ಮಾಡಿದ್ರು. ಇಬ್ಬರ ಜೀವವೂ ಹೋಗಿದೆ ಎಂದುಕೊಂಡ ಕಾಮುಕ ಅವರನ್ನು ಅಲ್ಲೇ ಹೊಂಡವೊಂದರಲ್ಲಿ ಬಿಸಾಡಿ ಹೊರಟು ಹೋಗಿದ್ದ. ಮರುದಿನ ಬಾಲಕಿಯ ಪೋಷಕರು ಅವರನ್ನು ಪತ್ತೆ ಮಾಡಿದ್ರು.

ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ಪಂಕಜ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಕಾಮುಕ ಪಂಕಜ್ ಬಾಲಕಿಯರ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...