alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತಲ ಕೋಣೆಯಿಂದ ಹೊರಬಂದ ಜೋಡಿ ಹೇಳಿದ್ರು ಈ ಕಥೆ

ಪ್ರೀತಿಗೆ ಬಿದ್ದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ವಿಷ್ಯ ಗೊತ್ತಾದ ಕುಟುಂಬಸ್ಥರು ಜೋಡಿಯನ್ನು ಹಿಡಿದು ತಂದು ಮನೆಯೊಳಗೆ ಕೂಡಿ ಹಾಕಿದ್ದರು. ಈ ಸುದ್ದಿ ಗ್ರಾಮಸ್ಥರಿಗೆ ಗೊತ್ತಾಗ್ತಿದ್ದಂತೆ ಪ್ರೇಮಿಗಳನ್ನು ಬಂಧನದಿಂದ ಬಿಡಿಸಿದ್ದಾರೆ. ಕತ್ತಲೆ ಕೋಣೆಯಿಂದ ಹೊರ ಬಂದ ಜೋಡಿ ತಮ್ಮ ಪ್ರೇಮ ಕಥೆಯನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.

ಘಟನೆ ಬಿಹಾರದಲ್ಲಿ ನಡೆದಿದೆ. 10ನೇ ತರಗತಿ ಓದುತ್ತಿರುವ ಹುಡುಗಿಗೆ ತಮಿಳುನಾಡು ಮೂಲದ ಕೂಲಿ ಕಾರ್ಮಿಕನ ಮೇಲೆ ಪ್ರೀತಿ ಶುರುವಾಗಿದೆ. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮನೆಯಿಂದ ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಇದು ಕುಟುಂಬಸ್ಥರಿಗೆ ಗೊತ್ತಾಗಿದೆ. ಕುಟುಂಬಸ್ಥರು ಪ್ರೇಮಿಗಳನ್ನು ಹಿಡಿದು ತಂದು ಮನೆಯೊಳಗೆ ಕೂಡಿ ಹಾಕಿದ್ದಾರೆ. ಸಾರ್ವಜನಿಕರ ಸಹಾಯದಿಂದ ಹೊರಗೆ ಬಂದ ಪ್ರೇಮಿಗಳು ರಿಜಿಸ್ಟರ್ ಮ್ಯಾರೇಜ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವಿಷ್ಯವನ್ನು ಪೊಲೀಸರಿಗೆ ತಿಳಿಸದ ಕುಟುಂಬಸ್ಥರು ಕೋರ್ಟ್ ಮ್ಯಾರೇಜ್ ಭರವಸೆ ನೀಡಿ ಮನೆಗೆ ಕರೆದೊಯ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...