alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನವೇ ಪೋಷಕರಿಗೆ ಶಾಕ್ ಕೊಟ್ಟ ಅಪ್ರಾಪ್ತ ಹುಡುಗಿ

wedding_marriage_generic_AFP_360x270

ರಾಂಚಿ: ತನ್ನ ವಿವಾಹವನ್ನು ನಿಗದಿ ಮಾಡಿದ್ದ ಪೋಷಕರಿಗೆ 9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಕ್ ನೀಡಿದ್ದಾಳೆ. ಜಾರ್ಖಂಡ್ ನಲ್ಲಿ ಈ ಘಟನೆ ನಡೆದಿದ್ದು, ರಾಂಚಿಯಿಂದ 200 ಕಿ.ಮೀ. ದೂರದ ಕುಗ್ರಾಮವೊಂದರ ಅಪ್ರಾಪ್ತ ಬಾಲಕಿ ಮಾಡಿರುವ ಈ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗುಮ್ಲಾ ಜಿಲ್ಲೆಯ ಗ್ರಾಮವೊಂದರ 14 ವರ್ಷದ ಬಾಲಕಿ ಮಮತಾ ಕುಮಾರಿಯ ವಿವಾಹವನ್ನು ಆಕೆಯ ಪೋಷಕರು ಫೆಬ್ರವರಿ 4 ರಂದು ನಿಗದಿಪಡಿಸಿದ್ದರು. ಅದಕ್ಕಾಗಿ ಶಾಸ್ತ್ರಗಳೂ ನಡೆದಿದ್ದವು. ಆದರೆ ಓದುವ ಹಂಬಲ ಹೊಂದಿದ್ದ ಬಾಲಕಿ ತಾನು ಈಗಲೇ ವಿವಾಹವಾಗುವುದಿಲ್ಲವೆಂದು ಪೋಷಕರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಅವರುಗಳು ಅದಕ್ಕೆ ಮಣಿಯಲಿಲ್ಲ.

ಇದರಿಂದ ಕಂಗಾಲಾದ ಬಾಲಕಿ, ಶಾಲೆಯ ಬಳಿ ಹೋಗಿ ಬರುತ್ತೇನೆಂದು ಹೇಳಿ ನೇರವಾಗಿ ತನ್ನ ಗ್ರಾಮದಿಂದ 10 ಕಿ.ಮೀ. ದೂರದಲ್ಲಿದ್ದ ಪೊಲೀಸ್ ಠಾಣೆಗೆ ತೆರಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಪೊಲೀಸರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಬಾಲಕಿಯ ವಿಚಾರವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಧೈರ್ಯವಾಗಿರುವಂತೆ ಬಾಲಕಿಗೆ ತಿಳಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಮನೆಗೆ ಬಂದ ಮಮತಾ ಕುಮಾರಿ ಯಾವೊಂದು ವಿಚಾರವನ್ನು ತಿಳಿಸದೆ ತನ್ನ ಪಾಡಿಗೆ ತಾನಿದ್ದು, ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ತಂಡ ಮನೆಗೆ ಬಂದಾಗ ಪೋಷಕರಿಗೆ ಶಾಕ್ ಆಗಿದೆ. ಇದೀಗ ಬಾಲಕಿಯ ವಿವಾಹವನ್ನು ತಡೆಯಲು ಸಫಲರಾದ ಅಧಿಕಾರಿಗಳ ತಂಡ ಆಕೆಯ ಮುಂದಿನ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದೆ. ಸದ್ಯ ಬಾಲಕಿ ಮಕ್ಕಳ ನಿಲಯದಲ್ಲಿದ್ದು, ಆಕೆ ತೋರಿದ ದಿಟ್ಟತನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...