alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ 15ರ ಬಾಲಕ

ಆಗ್ರಾದಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಎರಡು ಹೊತ್ತಿನ ಊಟಕ್ಕಾಗಿ ಶೂ ಕಾರ್ಖಾನೆಯಲ್ಲಿ ಕೆಲಸ ಮಾಡ್ತೇನೆ. ಆದ್ರೂ ಅಮ್ಮ ಸೈಕಲ್ ಕೊಡಿಸಿಲ್ಲ. ತಂದೆ ಸಾವಿನ ನಂತ್ರ ಮನೆ ಮಾರಾಟ ಮಾಡಿರುವ ತಾಯಿ ಎಲ್ಲ ಹಣವನ್ನು ಸ್ನೇಹಿತನಿಗಾಗಿ ಖರ್ಚು ಮಾಡ್ತಾಳೆ ಎಂದು ಬಾಲಕ ಪೊಲೀಸ್ ಬಳಿ ದೂರಿದ್ದಾನೆ.

ಘಟನೆ ನ್ಯೂ ಆಗ್ರಾದಲ್ಲಿ ನಡೆದಿದೆ. ಬಾಲಕ ಎಸ್ಪಿಗೆ ದೂರು ಸಲ್ಲಿಸಿದ್ದಾನೆ. ತಂದೆ ಸಾವಿನ ನಂತ್ರ ಅಮ್ಮ ಮಲ ತಾಯಿಯಂತೆ ವರ್ತಿಸುತ್ತಾಳೆ. ತಾಯಿಗೆ ಮೂವರು ಮಕ್ಕಳು. ತಾಯಿ ವರ್ತನೆ ಬಗ್ಗೆ ದನಿ ಎತ್ತಿದ್ರೆ ಹೊಡೆಯುತ್ತಾಳೆ. ಮನೆಯಿಂದ ಹೊರಗೆ ಹಾಕ್ತಾಳೆ. ಕೆಲಸಕ್ಕೆ ನಡೆದುಕೊಂಡು ಹೋಗುವುದು ಕಷ್ಟ. ಸೈಕಲ್ ಕೊಡಿಸು ಎಂದ್ರೆ ಬೈತಾಳೆಂದು ಬಾಲಕ ಆರೋಪ ಮಾಡಿದ್ದಾನೆ.

ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ಎಸ್ ಎಸ್ಪಿ, ಇನ್ಸ್ಪೆಕ್ಟರ್ ಗೆ ನೀಡಿದ್ದಾರೆ. ಮನೆ ಹಾಗೂ ಅಕ್ಕಪಕ್ಕದವರ ಅಭಿಪ್ರಾಯ ಸಂಗ್ರಹಿಸಿದ ನಂತ್ರ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...