alex Certify
ಕನ್ನಡ ದುನಿಯಾ       Mobile App
       

Kannada Duniya

ಬಾರ್ ಡಾನ್ಸರ್ ಆಗಲು ಲಿಂಗ ಪರಿವರ್ತನೆಗೆ ಮುಂದಾಗಿದ್ದ ಬಾಲಕ

ಬಾರ್ ಡಾನ್ಸರ್ ಆಗಬೇಕೆಂಬ ಹೆಬ್ಬಯಕೆಯಿಂದ ಲಿಂಗ ಪರಿವರ್ತನೆಗೆ ಮುಂದಾದ 14 ವರ್ಷದ ಬಾಲಕ ತನ್ನ ಸಂಬಂಧಿಕರ ಮನೆಯಿಂದ 16 ಲಕ್ಷ ಮೌಲ್ಯದ 500 ಗ್ರಾಂ ಬಂಗಾರ ಕದ್ದಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

14 ವರ್ಷದ ಬಾಲಕನಿಗೆ, ತನ್ನ ಆಂಟಿ ಹಾಗೂ ಆಕೆಯ ಸ್ನೇಹಿತೆಯಂತೆ ಬಾರ್ ಡ್ಯಾನ್ಸರ್ ಆಗಿ ಐಷಾರಾಮಿ ಜೀವನ ನಡೆಸಬೇಕೆಂಬ ಆಸೆಯಿತ್ತು. ಇದಕ್ಕೆ ಲಿಂಗ ಪರಿರ್ವತನೆ ಮಾಡಿಕೊಳ್ಳಲು ಅಗತ್ಯ ಹಣವನ್ನು, ತನ್ನ ಸಂಬಂಧಿಕರ ಮನೆಯಲ್ಲಿದ್ದ ಬಂಗಾರ ಕದ್ದು ಹೊಂದಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಬಾಲಕನನ್ನು ವಶಕ್ಕೆ ಪಡೆದು ಸರಕಾರದ ರಕ್ಷಣಾ ಗೃಹಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಲಕನಿಗೆ ಲಿಂಗಪರಿವರ್ತನೆ ಮಾಡಿಕೊಳ್ಳಲು ಹಾಗೂ ಕದಿಯಲು ಪ್ರೇರೇಪಿಸಿದ್ದ 18 ವರ್ಷದ ರೆಹನಾ ದನಾವತ್, ಪ್ರಶಾಂತ್ ಜ್ಞಾಂಡೆ, ಫರೂಕ್ ಹಾಗೂ ಇಮ್ರಾನ್ ನನ್ನು ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಾಲಕನನ್ನು ಮುಂಬೈನ ಮನೆಯೊಂದರಲ್ಲಿ ಲಿಂಗಪರಿವರ್ತನೆಗೆಂದು ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ತಾಯಿ ಇನ್ನೊಬ್ಬರ ಜತೆ ಓಡಿ ಹೋಗಿದ್ದರಿಂದ, ಬಾಲಕ ತನ್ನ ಆಂಟಿ ಮನೆಯಲ್ಲಿ ಬೆಳೆದಿದ್ದ. ಅವರ ಮನೆಯಲ್ಲಿದ್ದ ಮೊಬೈಲನ್ನೂ ಕದ್ದಿದ್ದಾನೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...