alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರದ ನಡೆಯಿಂದ ಬೋಗಸ್ ಕಂಪನಿಗಳಿಗೆ ಶುರುವಾಗಿದೆ ನಡುಕ

ನವದೆಹಲಿ: ನಿಷ್ಕ್ರಿಯಗೊಂಡಿರುವ ಕಂಪೆನಿ ನೋಂದಣಿ ರದ್ದುಗೊಳಿಸುವ ಕಾರ್ಯ ಮುಂದುವರಿಸಿರುವ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಮತ್ತೆ 50 ಸಾವಿರ ನೋಂದಣಿ ರದ್ದುಪಡಿಸಲು ಸಿದ್ಧತೆ ನಡೆಸಿದೆ. ಈ ಪಟ್ಟಿಯಲ್ಲಿರುವ ಕಂಪೆನಿಗಳ ಪೈಕಿ ಹನ್ನೊಂದು ಸಾವಿರ ಮುಂಬೈನಲ್ಲಿಯೇ ನೋಂದಣಿಗೊಂಡವುಗಳಾಗಿವೆ.

ಸತತ ಎರಡು ವರ್ಷ ಯಾವುದೇ ಆರ್ಥಿಕ ಚಟುವಟಿಕೆ, ಕಾರ್ಯಾಚರಣೆ ನಡೆಸದ ಕಂಪೆನಿಗಳನ್ನು ಗುರುತಿಸಿ, ಅವುಗಳಿಗೆ ನೋಟಿಸ್ ನೀಡಿ ನೋಂದಣಿ ರದ್ದುಗೊಳಿಸಲಾಗುತ್ತಿದೆ.

ನಿಷ್ಕ್ರಿಯಗೊಂಡ ಕಂಪೆನಿಗಳ ಹೆಸರಲ್ಲಿ ನಡೆಯುವ ಬೋಗಸ್ ವ್ಯವಹಾರ ತಡೆಗಟ್ಟಲು ಕೆಲವು ತಿಂಗಳ ಹಿಂದಷ್ಟೆ ನಿಷ್ಕ್ರಿಯಗೊಂಡ 2.5 ಲಕ್ಷ ಕಂಪೆನಿಗಳನ್ನು ಗುರುತಿಸಿ ನೋಂದಣಿ ರದ್ದುಗೊಳಿಸಲಾಗಿತ್ತು.

ನಿಷ್ಕ್ರಿಯಗೊಂಡ ಕಂಪನಿಗಳ ಹೆಸರಲ್ಲಿ ಹಣ ವರ್ಗಾವಣೆಯಾಗುವುದನ್ನು ಗುರುತಿಸಿದ್ದು, ಇದನ್ನು ತಡೆಯಲು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಬೋಗಸ್ ಕಂಪನಿಗಳ ಪತ್ತೆಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...