alex Certify
ಕನ್ನಡ ದುನಿಯಾ       Mobile App
       

Kannada Duniya

ರೈತನ ಬೆಳೆ ನಾಶ ಮಾಡಿದೆ ಸಚಿವರ ಬೆಂಗಾವಲು ಪಡೆ

ಉತ್ತರ ಪ್ರದೇಶದ ಬಂದೀಖಾನೆ ಸಚಿವ ಜೈ ಕುಮಾರ್ ಸಿಂಗ್ ಜೈಕಿ ಅವರ ಬೆಂಗಾವಲು ಪಡೆ ಬಡ ರೈತನ ಬೆಳೆಯನ್ನೇ ಸಂಪೂರ್ಣ ನಾಶಮಾಡಿದೆ.

ದೇವೇಂದ್ರ ಕುಮಾರ್ ದೊಹ್ರೆ ಎಂಬ ರೈತ ಕಳೆದ ವಾರವಷ್ಟೆ ಹೊಲವನ್ನು ಹದ ಮಾಡಿ ಬೀಜ ಬಿತ್ತನೆ ಮಾಡಿದ್ದ. ಆದ್ರೆ ನಿನ್ನೆ ಸಚಿವರ ಬೆಂಗಾವಲು ಪಡೆಯ 35 ವಾಹನಗಳು ದೇವೇಂದ್ರ ಕುಮಾರ್ ನ ಹೊಲದಲ್ಲೇ ಹಾದು ಹೋಗಿವೆ. ಬಿತ್ತಿದ್ದ ಬೀಜವೆಲ್ಲ ವಾಹನದ ಅಡಿಗೆ ಸಿಕ್ಕು ನಾಶವಾಗಿದೆ. 35,000 ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತನಿಗೆ 4000 ರೂ. ಪರಿಹಾರ ಕೊಟ್ಟು ಸಚಿವರು ಕೈತೊಳೆದುಕೊಂಡಿದ್ದಾರೆ.

ಓರೈನಲ್ಲಿರೋ ಗೋಶಾಲೆಯೊಂದರ ಭೂಮಿ ಪೂಜೆಗಾಗಿ ಸಚಿವರು ಆಗಮಿಸಿದ್ರು. ಗೋಶಾಲೆ ದೇವೇಂದ್ರ ಕುಮಾರ್ ಗೆ ಸೇರಿದ ಹೊಲದ ಸಮೀಪದಲ್ಲೇ ಇದೆ. ರಸ್ತೆಯ ಮೂಲಕ ಬಂದ್ರೆ ಹೆಚ್ಚು ಸಮಯ ಹಿಡಿಯುತ್ತದೆ ಅನ್ನೊ ಕಾರಣಕ್ಕೆ ಸಚಿವರ ಬೆನ್ನಿಗಿದ್ದ ವಾಹನಗಳೆಲ್ಲ ಹೊಲದಲ್ಲೇ ನುಗ್ಗಿಕೊಂಡು ಹೊರಟು ಹೋಗಿವೆ.

ಹೊಲದೊಳಕ್ಕೆ ವಾಹನ ನುಗ್ಗಿಸದಂತೆ ರೈತ ಬೇಡಿಕೊಂಡ್ರೂ ಯಾರೂ ಕಿವಿಗೊಟ್ಟಿಲ್ಲ. ಕೊನೆಗೆ ಸಚಿವರ ಕಾಲಿಗೆ ಬಿದ್ದು ರೈತ ತನ್ನ ಅಳಲು ತೋಡಿಕೊಂಡಿದ್ದಾನೆ. ಅವನ ಕೈಗೆ 2000 ರೂಪಾಯಿಯ 2 ನೋಟು ಕೊಟ್ಟು ಸಚಿವ ಮಹಾಶಯರು ಅಲ್ಲಿಂದ ಹೊರಟೇ ಹೋಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...