alex Certify
ಕನ್ನಡ ದುನಿಯಾ       Mobile App
       

Kannada Duniya

100 ಕೋಟಿ ಆಸ್ತಿ ಬಿಟ್ಟು ಸನ್ಯಾಸಿಯಾಗ್ತಿದ್ದಾರೆ ದಂಪತಿ

ಶ್ರೀಮಂತರಾಗಿ ಐಷಾರಾಮಿ ಜೀವನ ನಡೆಸಲು ಅನೇಕರು ದಿನವಿಡಿ ಬೆವರು ಸುರಿಸ್ತಾರೆ. ಆದ್ರೆ ಕೈ ತುಂಬಾ ಹಣ, ಐಷಾರಾಮಿ ಜೀವನವಿರುವ ಈ ದಂಪತಿ ಮಾತ್ರ ಸನ್ಯಾಸಿಯಾಗ ಹೊರಟಿದ್ದಾರೆ. 100 ಕೋಟಿಗೂ ಹೆಚ್ಚು ಆಸ್ತಿ ಹಾಗೂ ತಿಂಗಳಿಗೆ ಬರುವ ಲಕ್ಷಗಟ್ಟಲೆ ಸಂಬಳವನ್ನು ಬಿಟ್ಟು ದಂಪತಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.

ಮಧ್ಯಪ್ರದೇಶದ ನಿಮಚ್ ನ 34 ವರ್ಷದ ಸುಮಿತ್ ರಾಥೋಡ್ ಬ್ಯುಸಿಸೆನ್ ಮೆನ್. ಲಂಡನ್ ನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಪತ್ನಿ ಅನಾಮಿಕಾ ಇಂಜಿನಿಯರಿಂಗ್ ಡಿಗ್ರಿ ಪಡೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದಾರೆ. ಮೂರು ವರ್ಷದ ಮುದ್ದಾದ ಮಗುವೊಂದಿದೆ. ಕುಟುಂಬಸ್ಥರು ಏನು ಹೇಳಿದ್ರೂ ಕೇಳದ ಈ ದಂಪತಿ ಸೆಪ್ಟೆಂಬರ್ 23ರಂದು ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ.

ಆತ್ಮಕಲ್ಯಾಣ ಮಾಡಿಕೊಳ್ಳುವ ಮನಸ್ಸು ಅವರಿಗೆ ಬಂದಿದೆಯಂತೆ. ಮಗು 8 ತಿಂಗಳಿನಲ್ಲಿರುವಾಗಲೇ ದಂಪತಿ ಬ್ರಹ್ಮಚರ್ಯ ಪಾಲಿಸಲು ಶುರುಮಾಡಿದ್ದಾರಂತೆ. ಮಗು ಪುಣ್ಯವಂತೆ. ಅದು ಗರ್ಭಕ್ಕೆ ಬಂದ ನಂತ್ರ ನಮಗೆ ಜ್ಞಾನೋದಯವಾಗಿದೆ ಎನ್ನುತ್ತಾರೆ ದಂಪತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...