alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟೆ ಹಾಲಿಗೆ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ…?

ಒಂಟೆ ಹಾಲು ಮತ್ತು ಅದರ ಉಪ ಉತ್ಪನ್ನಗಳಿಗೆ ವಿದೇಶದಿಂದ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಒಂಟೆ ಹಾಲು ಮತ್ತು ಹಾಲಿನ ಪೌಡರ್ ಈಗ ವಿದೇಶಿ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಉತ್ಪನ್ನವಾಗಿಬಿಟ್ಟಿದೆ.

ಅದರಲ್ಲು ಅಮೆರಿಕ ಒಂಟೆ ಹಾಲನ್ನ ಭಾರತದಿಂದ ಮುಗಿಬಿದ್ದು ಖರೀದಿಸುತ್ತಿದೆ. ಹಾಗಾಗಿ ರಾಜಸ್ಥಾನ ಮತ್ತು ಸೂರತ್ ನಲ್ಲಿ ಒಂಟೆ ಹಾಲು ಉತ್ಪಾದನಾ ಘಟಕಗಳಿಗೆ ಭಾರೀ ಬೇಡಿಕೆ ಇದೆ.
ಒಂದು ಲೀಟರ್ ಒಂಟೆ ಹಾಲಿನ ಬೆಲೆ 50 ಡಾಲರ್ ಅಂದ್ರೆ 3000 ರೂಪಾಯಿಗಳಿಗೆ ನಿಗದಿಯಾಗಿದೆ.

ಈಗಾಗ್ಲೇ ಬಿಕೆನಾರ್, ಕಛ್ ಮತ್ತು ಸೂರತ್ನಲ್ಲಿರುವ ಒಂಟೆ ಹಾಲು ಉತ್ಪಾದನಾ ಘಟಕಗಳು ಟೆಟ್ರಾಪ್ಯಾಕ್ ರೂಪದಲ್ಲಿ ಒಂಟೆ ಹಾಲನ್ನು ಮಾರಾಟ ಮಾಡುತ್ತಿವೆ. ಅಲ್ಲದೇ 200 ಮತ್ತು 500 ಗ್ರಾಂ ಪೌಡರ್ ರೂಪದಲ್ಲೂ ಒಂಟೆ ಹಾಲು ಮಾರಾಟವಾಗ್ತಿದೆ. ತಿಂಗಳ ಅವಧಿಯಲ್ಲಿ 6000 ಲೀಟರ್ನಷ್ಟು ಹಸುವಿನ ಹಾಲು ಅಮೆಜಾನ್ ಆನ್ಲೈನ್ ಶಾಪ್ನಲ್ಲಿ ಸೇಲಾಗಿದೆ.

ವೈದ್ಯಕೀಯ ಕಾರಣಗಳಿಗಾಗಿ ಒಂಟೆಯ ಹಾಲಿಗೆ ಡಿಮ್ಯಾಂಡ್ ಹೆಚ್ಚಿದೆ. ಒಂಟೆಯ ಹಾಲು ಡಯಾಬಿಟೀಸ್, ಜಾಯಿಂಟ್ ಪೇನ್ನಂತಾ ಕಾಯಿಲೆಗಳಿಗೆ ಔಷಧವಾಗಿದೆ. ಇರಾನ್ನ ಮಸಾದ್ ವೈದ್ಯಕೀಯ ವಿವಿ ಅಧ್ಯಯನದ ಪ್ರಕಾರ ಹಸುವಿನ ಹಾಲಿನಲ್ಲಿರುವಷ್ಟೇ ಪ್ರಮಾಣದ ಲ್ಯಾಕ್ಟೋಸ್ಗಳು ಒಂಟೆಯ ಹಾಲಿನಲ್ಲೂ ಇವೆ. ಇದರಿಂದಾಗಿ ಇನ್ಸುಲಿನ್ ಪ್ರಮಾಣವನ್ನು ಒಂಟೆಯ ಹಾಲು ಹತೋಟಿಯಲ್ಲಿಡುವ ಕಾರಣಕ್ಕೆ ಒಂಟೆಯ ಹಾಲಿಗೆ ಡಿಮ್ಯಾಂಡ್ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...