alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮೇಲೆ ಬಿತ್ತು MiG-27 ವಿಮಾನ

mig27-146ಭಾರತೀಯ ವಾಯುಪಡೆಗೆ ಸೇರಿದ MiG-27 ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ರಾಜಸ್ಥಾನದ ಜೋಧ್ಪುರ್ ಹೊರ ವಲಯದಲ್ಲಿ ಮನೆ ಮೇಲೆ ವಿಮಾನ ಬಿದ್ದಿದ್ದು, ಇದರಿಂದಾಗಿ ಇಬ್ಬರು ಗಾಯಗೊಂಡಿದ್ದಾರೆಂದು ಹೇಳಲಾಗಿದೆ.

ಪೈಲಟ್, ತರಬೇತಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ಸುರಕ್ಷಿತವಾಗಿ ಕೆಳಗಿಳಿಸಲು ಸಾಧ್ಯವಾಗಲಿಲ್ಲವೆನ್ನಲಾಗಿದೆ. ಪೈಲಟ್ ಹೊರ ಜಿಗಿದಿದ್ದು, ಮಹಾವೀರ್ ನಗರದ ಎರಡು ಮನೆಗಳ ಮೇಲೆ ವಿಮಾನ ಬಿದ್ದಿದೆ.

ಇದರಿಂದಾಗಿ ಇಬ್ಬರಿಗೆ ಗಾಯಗಳಾಗಿದೆ ಎಂದು ಹೇಳಲಾಗಿದ್ದರೂ ಖಚಿತಪಟ್ಟಿಲ್ಲ. ಘಟನೆ ಕುರಿತಂತೆ ತನಿಖೆ ನಡೆಸಲು ವಾಯುಪಡೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಈ ಹಿಂದೆಯೂ ಹಲವು MiG-27 ವಿಮಾನಗಳು ಪತನಗೊಂಡಿದ್ದು, ಈ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...