alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ- ನ್ಯೂಜಿಲ್ಯಾಂಡ್ ನಡುವಣ ಮುಂದಿನ ಪಂದ್ಯಗಳು ರದ್ದು ?

Cricket - India v New Zealand - Second Test cricket match - Eden Gardens, Kolkata, India - 03/10/2016. India's players celebrate the dismissal of New Zealand's Tom Latham. REUTERS/Rupak De Chowdhuriಲೋಧಾ ಸಮಿತಿ, ಬಿಸಿಸಿಐ ನ ಖಾತೆಗಳಲ್ಲಿರುವ ಹಣವನ್ನು ಪಾವತಿಸದಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಹತಾಶಗೊಂಡಿರುವ ಬಿಸಿಸಿಐ, ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣದ ಮುಂದಿನ ಪಂದ್ಯಗಳನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

ಕ್ರಿಕೆಟ್ ಸುಧಾರಣೆಗಾಗಿ ಲೋಧಾ ಸಮಿತಿ, ಸುಪ್ರೀಂ ಕೋರ್ಟ್ ಗೆ ನೀಡಿದ್ದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸಲು ಬಿಸಿಸಿಐ ಹಿಂದೇಟು ಹಾಕಿದ್ದ ಕಾರಣ ಲೋಧಾ ಸಮಿತಿ, ಬ್ಯಾಂಕ್ ಗಳಿಗೆ ಈ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ನ್ಯೂಜಿಲ್ಯಾಂಡ್ ವಿರುದ್ದ ಭಾರತ ಇನ್ನೂ ಒಂದು ಟೆಸ್ಟ್ ಹಾಗೂ ಐದು ಏಕ ದಿನ ಪಂದ್ಯಗಳನ್ನಾಡಬೇಕಿದ್ದು, ಬಿಸಿಸಿಐ ನ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಹಿವಾಟಿಗೆ ಈಗ ತಡೆ ಬಿದ್ದಿರುವ ಕಾರಣ ಈ ಪಂದ್ಯಾವಳಿಗಳನ್ನು ನಡೆಸಲು ಹಣದ ಮುಗ್ಗಟ್ಟು ಎದುರಾಗಬಹುದೆಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಗಳು, ಅಂತರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವ ವೇಳೆ ಬಿಸಿಸಿಐ ನ ಹಣದ ವಹಿವಾಟಿಗೆ ತಡೆ ಒಡ್ಡಿರುವುದರಿಂದ ಸಮಸ್ಯೆ ಉದ್ಬವವಾಗಿದೆ. ಹಣವೇ ಇಲ್ಲವೆಂದಾದರೆ ಪಂದ್ಯಾವಳಿಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...