alex Certify
ಕನ್ನಡ ದುನಿಯಾ       Mobile App
       

Kannada Duniya

ನರೇಂದ್ರ ಮೋದಿ ಹಸ್ತಾಕ್ಷರ ಹಾಕಿದ್ದ ಹುಡುಗಿ ಹಿಂದೆ ಬಿದ್ದಿದ್ದಾರೆ ಹುಡುಗ್ರು…!

ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜುಲೈ 16 ರಂದು ನರೇಂದ್ರ ಮೋದಿ ರ್ಯಾಲಿ ನಡೆಸಿದ್ದರು. ಈ ವೇಳೆ ಒಂದು ಭಾಗದ ಪೆಂಡಾಲ್ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಗಾಯಾಳುಗಳ ಭೇಟಿಗೆ ಹೋಗಿದ್ದ ನರೇಂದ್ರ ಮೋದಿ 19 ವರ್ಷದ ಗೀತಾ ಮೂಡಿ ಎಂಬಾಕೆಯನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದರು.

ನರೇಂದ್ರ ಮೋದಿ ಎದುರಿಗೆ ಬಂದಿರುವುದನ್ನು ಗೀತಾ ನಂಬಿರಲಿಲ್ಲ. ತುಂಬಾ ಖುಷಿಯಾಗಿದ್ದ ಗೀತಾ ಆಟೋಗ್ರಾಫ್ ಕೇಳಿದ್ದಳು. ಗೀತಾಗೆ ಆಟೋಗ್ರಾಫ್ ನೀಡಿದ್ದ ಮೋದಿ ಗೀತಾ ನೀನು ಖುಷಿಯಾಗಿರು ಎಂದಿದ್ದರು. ಮೋದಿ ಹಸ್ತಾಕ್ಷರ ಬೀಳ್ತಿದ್ದಂತೆ ಗೀತಾ ಅದೃಷ್ಟ ಬದಲಾಗಿದೆಯಂತೆ.

ಗೀತಾ ಮನೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಸೆಲೆಬ್ರಿಟಿ ರೀತಿಯಲ್ಲಿ ಗೀತಾಳನ್ನು ನೋಡ್ತಾರಂತೆ. ಎರಡು ಕಡೆ ಮದುವೆ ಸಂಬಂಧ ಬಂದಿದೆಯಂತೆ. ಈ ಹಿಂದೆ ಒಂದು ಸಂಬಂಧ ನೋಡಲಾಗಿತ್ತಂತೆ. ಅವ್ರು 1 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದರಂತೆ. ಆದ್ರೀಗ ವರದಕ್ಷಿಣೆಯಿಲ್ಲದೆ ಮದುವೆಯಾಗಲು ಕೆಲ ಹುಡುಗರು ಆಸಕ್ತಿ ತೋರಿದ್ದಾರಂತೆ. ಮೊದಲು ಓದು ನಂತ್ರ ಮದುವೆ ಎನ್ನುತ್ತಿದ್ದಾಳೆ ಗೀತಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...