alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಮೈಮೇಲೆ ಬಿಸಿ ಬಿಸಿ ದಾಲ್ ಚೆಲ್ಲಿದ್ರು

ಶಾಲಾ ಮಕ್ಕಳ ಮಧ್ಯಾಹ್ನದ ಊಟ ಇತ್ತೀಚಿಗೆ ವಿಷವಾಗ್ತಿದೆ. ಕಲುಷಿತ ಆಹಾರ ಸೇವನೆ ಮಾಡಿ ಮಕ್ಕಳು ಆಸ್ಪತ್ರೆ ಸೇರುವ ಘಟನೆ ಅಲ್ಲಲ್ಲಿ ವರದಿಯಾಗ್ತಿದೆ. ಆದ್ರೆ ಮಧ್ಯಪ್ರದೇಶದಲ್ಲಿ ಒಂದನೇ ತರಗತಿ ಓದುತ್ತಿರುವ ಬಾಲಕನಿಗೆ ಮಧ್ಯಾಹ್ನದೂಟ ತಯಾರಿಸುವವರೇ ವಿಲನ್ ಗಳಾಗಿದ್ದಾರೆ.

ದಿಂಡೋರಿ ಜಿಲ್ಲೆಯ ಶಹಪುರದ ಲುದ್ರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಸಿಬ್ಬಂದಿ ಕ್ರೌರ್ಯ ಮೆರೆದಿದ್ದಾರೆ. 1ನೇ ತರಗತಿ ಓದುತ್ತಿರುವ ಬಾಲಕನ ಮೇಲೆ ಬಿಸಿ ಬಿಸಿ ದಾಲ್ ಎರಚಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ತನಿಖೆ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...