alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಟಿಎಂ..!

atm-2_8UtcXJc

ಹಣ ತುಂಬಲು ಅಥವಾ ತೆಗೆಯಲು ಇನ್ನು ಮುಂದೆ ಬ್ಯಾಂಕ್, ಪೋಸ್ಟ್ ಆಫೀಸ್ ಅಂತಾ ಅಲೆಯಬೇಕಾಗಿಲ್ಲ. ಎಟಿಎಂ ಮುಂದೆ ಕ್ಯೂನಲ್ಲಿ ನಿಲ್ಲುವ ತೊಂದರೆಯೂ ಇಲ್ಲ. ಗ್ರಾಹಕರಿಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ತರ್ತಾ ಇದೆ. ಈ ಯೋಜನೆ ಪ್ರಕಾರ ಎಟಿಎಂ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಈ ವಿಷಯವನ್ನು ತಿಳಿಸಿದ್ದಾರೆ. ಯಾವುದೇ ಬ್ಯಾಂಕ್ ನ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹಣ ತುಂಬುವುದಾಗಲಿ ಇಲ್ಲ ತೆಗೆಯುವುದಾಗಲಿ ಮನೆ ಬಾಗಿಲಿನಲ್ಲಿಯೇ ಮಾಡಬಹುದು. ಇದೇ ವರ್ಷ 20 ಸಾವಿರ ಮೈಕ್ರೋ ಎಟಿಎಂ ಪೋಸ್ಟ್ ಮೆನ್ ಹಾಗೂ ಮುಂದಿನ ವರ್ಷ ಮಾರ್ಚ್ ಒಳಗೆ ದೇಶದಾದ್ಯಂತ 1 ಲಕ್ಷ 30 ಸಾವಿರ ಪೋಸ್ಟ್ ಮೆನ್ ಸಜ್ಜುಗೊಳ್ಳಲಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಸೆಪ್ಟೆಂಬರ್ ನಿಂದ ಮನೆಯಲ್ಲಿಯೇ ಕುಳಿತು ಹಣ ತುಂಬುವ ಹಾಗೂ ತೆಗೆಯುವ ಸೌಲಭ್ಯ ಭಾರತದ ಜನತೆಗೆ ದೊರೆಯಲಿದೆ. ಈ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ರವಿಶಂಕರ್ ತಿಳಿಸಿದ್ದಾರೆ. ಬ್ಯಾಂಕ್ ಹಾಗೂ ಎಟಿಂಎಂ ಸಂಖ್ಯೆ ಕಡಿಮೆ ಇರುವ ಜಾಗದಲ್ಲಿ ಈ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...