alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ಸಿಟಿಯಾಯ್ತು ಲಕ್ನೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಈಗ ಮೆಟ್ರೋ ಸಿಟಿಯಾಗಿದೆ. ಮಂಗಳವಾರ ಮೆಟ್ರೋ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಮಂತ್ರಿ ರಾಜನಾಥ್ ಸಿಂಗ್ ಮತ್ತು ರಾಜ್ಯಪಾಲ ರಾಮ್ ನಾಯ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಉದ್ಘಾಟನೆಗೊಂಡಿರುವ ಮೆಟ್ರೋ ಸೆಪ್ಟೆಂಬರ್ 6ರಿಂದ ಸಾಮಾನ್ಯ ಜನರಿಗೆ ಸೇವೆ ನೀಡಲಿದೆ. ಉದ್ಘಾಟನೆ ವೇಳೆ ಮಾತನಾಡಿದ ಯೋಗಿ ಸಮಯಕ್ಕೆ ಸರಿಯಾಗಿ ಯೋಜನೆ ಮುಗಿಸಿದ ಮೆಟ್ರೋ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಬುಧವಾರ ಸಾರ್ವಜನಿಕರು ಮೆಟ್ರೋದಲ್ಲಿ ಸಂಚಾರ ಬೆಳೆಸಬಹುದೆಂದು ಯೋಗಿ ಹೇಳಿದ್ದಾರೆ.

ಲಕ್ನೋ ಮೆಟ್ರೋವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಮರ್ಪಿಸುತ್ತಿರುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ. ನವಾಬ್ ಗಳ ಶಹರದ ಜೊತೆ ಮೆಟ್ರೋ ನಗರವೆಂಬ ಪಟ್ಟ ಲಕ್ನೋಗೆ ಸಿಕ್ಕಿದೆ. ಲಕ್ನೋದ ಸುತ್ತ 104 ಕಿಲೋಮೀಟರ್ ರಿಂಗ್ ರೋಡ್ ನಿರ್ಮಾಣವಾಗಲಿದ್ದು, ಕೆಲಸ ಈಗಾಗ್ಲೇ ಶುರುವಾಗಿದ್ದು, ಖುಷಿಯಾಗ್ತಿದೆ ಎಂದು ರಾಜನಾಥ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...