alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಸಿಕ ಅಸ್ವಸ್ಥೆಯನ್ನೂ ಬಿಡಲಿಲ್ಲ ದುರುಳರು

rajasthan-759ರಾಜಸ್ಥಾನದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಕಿಡಿಗೇಡಿಗಳ ಗುಂಪು ರಬ್ಬರ್ ಪೈಪ್ ನಿಂದ ಅಮಾನುಷವಾಗಿ ಥಳಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮುಖವನ್ನು ಮರೆ ಮಾಚಿಕೊಂಡಿದ್ದ ಮೂರ್ನಾಲ್ಕು ಯುವಕರ ಗುಂಪು ರಸ್ತೆ ಬದಿ ಇದ್ದ ಮಾನಸಿಕ ಅಸ್ವಸ್ಥೆಗೆ ಮೊದಲು ಗೇಲಿ ಮಾಡಿದೆ.

ಬಳಿಕ ಆಕೆಗೆ ಅಲ್ಲಾ, ಜೈ ಶ್ರೀ ಹನುಮಾನ್, ಜೈ ಹನುಮಾನ್ ಎಂದು ಹೇಳುವಂತೆ ಪೀಡಿಸಿದ್ದು, ರಬ್ಬರ್ ಪೈಪ್ ನಿಂದ ಆಕೆಯನ್ನು ಮನಬಂದಂತೆ ಥಳಿಸಿದ್ದಾರೆ. ಸ್ಥಳದಲ್ಲಿದ್ದವರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಪ್ರಕಾಶ್ ಮತ್ತು ಶ್ರವಣ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...