alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಹಳಿ ನಿರ್ವಾಹಕರು ಮಾಡ್ತಿದ್ದಾರೆ ಅಧಿಕಾರಿಗಳ ಮನೆ ಚಾಕರಿ

ಮುಂಬೈನಲ್ಲಿ ರೈಲ್ವೆ ಹಳಿ ನಿರ್ವಾಹಕರಲ್ಲಿ ಹಲವರು ಡಬಲ್ ಗ್ರಾಜ್ಯುಯೇಟ್ಸ್ ಇದ್ದಾರೆ. ಆದ್ರೆ ಅವರು ಮಾಡ್ತಾ ಇರೋ ಕೆಲಸ ಏನು ಗೊತ್ತಾ? ಇಲಾಖೆಯ ಹಿರಿಯ ಅಧಿಕಾರಿಗಳ ಮನೆ ಚಾಕರಿ. ಅವರನ್ನೆಲ್ಲ ಹಿರಿಯ ಅಧಿಕಾರಿಗಳು  ತಮ್ಮ ಮನೆ ಕೆಲಸಕ್ಕೆ ಇಟ್ಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪದೇ ಪದೇ ರೈಲು ಅಪಘಾತ ಸಂಭವಿಸ್ತಾ ಇರೋದಕ್ಕೆ ಇದೂ ಒಂದು ಕಾರಣ. ರೈಲ್ವೆ ಹಳಿಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ನೌಕರರು ಅಧಿಕಾರಿಗಳ ಸೇವೆ ಮಾಡುವಂತಾಗಿದೆ. ಈ ವರ್ಷ ದೇಶದಲ್ಲಿ 9 ಭೀಕರ ರೈಲ್ವೆ ಅಪಘಾತಗಳು ಸಂಭವಿಸಿವೆ.

ಮುಂಬೈನಲ್ಲೇ 3 ಬಾರಿ ರೈಲು ಹಳಿ ತಪ್ಪಿದೆ. 65 ಜನರು ಮೃತಪಟ್ಟಿದ್ದು, 245ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಳಿ ನಿರ್ವಾಹಕರನ್ನು ಯಾರ್ಯಾರು ಮನೆ ಕೆಲಸದವರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಅನ್ನೊದನ್ನು ಪತ್ತೆ ಮಾಡುವಂತೆ ರೈಲ್ವೆ ಮಂಡಳಿ ಮುಖ್ಯಸ್ಥ ಅಶ್ವನಿ ಲೋಹಾನಿ ಸೂಚಿಸಿದ್ದರು.

ಎಲ್ಲರನ್ನೂ ಮರಳಿ ಹಳಿ ನಿರ್ವಹಣೆಗೆ ನಿಯೋಜಿಸುವಂತೆ ಖಡಕ್ ಆದೇಶ ನೀಡಿದ್ದರು. ಆದ್ರೆ ಹಳಿ ನಿರ್ವಾಹಕರ ಕೊರತೆ ಎದ್ದು ಕಾಣ್ತಾ ಇದೆ. ಮುಂಬೈ ವಿಭಾಗಕ್ಕೆ 5100 ಹಳಿ ನಿರ್ವಾಹಕರಿದ್ದಾರೆ ಅನ್ನೋದು ಇಲಾಖೆಯ ಲೆಕ್ಕ. ಆದ್ರೆ ಕರ್ತವ್ಯ ನಿರ್ವಹಿಸುತ್ತಿರುವವರು 4100 ಮಂದಿ ಮಾತ್ರ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...