alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಯುವತಿ ಅಪಹರಣ ಯತ್ನ: ನೋಡಿಯೂ ಸುಮ್ಮನಿದ್ರು ಜನ

molestation

ಗುರ್ಗಾಂವ್ ನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಯುವತಿಯನ್ನು ಎಳೆದಾಡಿ, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಲು ಯತ್ನಿಸಿದ್ದಾನೆ. ಜೈಪುರದಿಂದ ಬಂದಿದ್ದ 26 ವರ್ಷದ ಯುವತಿ ಆಗಷ್ಟೇ ವೋಲ್ವೋ ಬಸ್ ನಿಂದ ಇಳಿದು ನಡೆದುಕೊಂಡು ಬರ್ತಾ ಇದ್ಲು. ಕ್ಯಾಬ್ ಬುಕ್ ಮಾಡೋಣ ಎಂದುಕೊಂಡು ಅಲ್ಲೇ ನಿಂತು ಮೊಬೈಲ್ ತೆಗೆದಿದ್ದಾಳೆ ಅಷ್ಟೆ.

ಆಗ ಸಂಜೆ ಸುಮಾರು 7 ಗಂಟೆ ಸಮಯ, ಆಕೆಯ ಪಕ್ಕದಲ್ಲೇ ಸ್ಕಾರ್ಪಿಯೋ ವಾಹನವೊಂದು ಬಂದು ನಿಂತಿತ್ತು. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದವನೊಬ್ಬ ರಸ್ತೆಯಲ್ಲಿ ನಿಂತಿದ್ದ ಆಕೆಯ ಕೈಹಿಡಿದು ಎಳೆದಿದ್ದಾನೆ. ಅವಳನ್ನು ಎಳೆದು ಕಾರಿನಲ್ಲಿ ಕೂರಿಸಲು ಪ್ರಯತ್ನಿಸಿದ್ದಾನೆ. ಆಕೆ ಜೋರಾಗಿ ಕೂಗುತ್ತ, ಅಳುತ್ತಿರುವುದನ್ನು ನೋಡಿದ್ರೂ ಯಾರೊಬ್ಬರೂ ಅವಳ ಸಹಾಯಕ್ಕೆ ಬಂದಿಲ್ಲ.

ಸಂಜೆ ಸಮಯವಾಗಿದ್ದರಿಂದ ಅಲ್ಲಿ ಜನಜಂಗುಳಿ ಹೆಚ್ಚಾಗಿಯೇ ಇತ್ತು, ಆದ್ರೂ ಆ ಕಾಮುಕ ಸಾರ್ವಜನಿಕರ ಸಮ್ಮುಖದಲ್ಲೇ ಯುವತಿಯನ್ನು ಪೀಡಿಸಿದ್ದಾನೆ, ಅಪಹರಿಸಲು ಯತ್ನಿಸಿದ್ದಾನೆ. ಆದ್ರೂ ಅದನ್ನೆಲ್ಲ ನೋಡಿಕೊಂಡು ಜನ ಸುಮ್ಮನಿದ್ದಾರೆ. ಈ ಘಟನೆ ಬಗ್ಗೆ ಯುವತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಕಾಮುಕನಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಾರಿನ ನಂಬರ್ ಕೂಡ ಗಮನಿಸಲು ಸಾಧ್ಯವಾಗಿಲ್ಲ, ಹಾಗಾಗಿ ದೂರು ಕೊಡಲೋ ಬೇಡವೋ ಎಂಬ ಬಗ್ಗೆ ಗೊಂದಲವಿರುವುದಾಗಿ ತಿಳಿಸಿದ್ದಾರೆ. ಇನ್ನು ಘಟನೆ ಬಗ್ಗೆ ತಿಳಿದ ಪೊಲೀಸರು ಆನ್ ಲೈನ್ ಅಥವಾ ಫೋನ್ ಮೂಲಕವಾದ್ರೂ ದೂರು ಕೊಡುವಂತೆ ಮನವಿ ಮಾಡಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...