alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಮೇಲ್ವಿಚಾರಕರ ಎದುರೇ ನಡೀತು ನಕಲು

window

ಬೆಳಗ್ಗೆ 7.30 ರ ಸಮಯ. ಮಥುರಾದ ರಾಧಾ ಗೋಪಾಲ ಇಂಟರ್ ಕಾಲೇಜಿನಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳೆಲ್ಲ ಪ್ರಶ್ನೆಪತ್ರಿಕೆಯಲ್ಲಿ ಮುಳುಗಿ ಹೋಗಿದ್ರೆ, ಕೊಠಡಿ ಮೇಲ್ವಿಚಾರಣೆಗೆ ನಿಯುಕ್ತರಾಗಿದ್ದ ಶಿಕ್ಷಕರು ಕೂಡ ಅತ್ತಿಂದಿತ್ತ ಓಡಾಡುತ್ತಿದ್ರು. ಇಡೀ ಕೋಣೆ ನಿಶ್ಯಬ್ಧವಾಗಿತ್ತು. ಆದ್ರೆ ಕಿಟಕಿಯಿಂದ ವ್ಯಕ್ತಿಯೊಬ್ಬ ಒಳಗೆ ಕುಳಿತು ಪರೀಕ್ಷೆ ಬರೆಯುತ್ತಿದ್ದವನಿಗೆ ಉತ್ತರಗಳನ್ನು ಹೇಳಿಕೊಡ್ತಾ ಇದ್ದ.

ಇಡೀ ಪೇಪರ್ ಬರೆದು ಮುಗಿಸುವವರೆಗೆ ಆತ ಉತ್ತರಗಳನ್ನೆಲ್ಲ ಕಿಟಿಕಿ ಮುಖಾಂತರವೇ ಹೇಳಿಕೊಟ್ಟಿದ್ದಾನೆ. ಇದೊಂಥರಾ ಪರೀಕ್ಷೆ ನಕಲು ಮಾಫಿಯಾ. ಇದನ್ನೆಲ್ಲ ನೋಡಿಯೂ ಮೇಲ್ವಿಚಾರಕರು ಸುಮ್ಮನಿದ್ರು. ನಕಲು ತಡೆಯುವ ಪ್ರಯತ್ನಕ್ಕೇ ಹೋಗಲಿಲ್ಲ. ಬರ್ತಾ ಬರ್ತಾ ಇಡೀ ಕೊಠಡಿಯೇ ಗದ್ದಲದ ಗೂಡಾಗಿತ್ತು.

ಒಂದ್ಕಡೆ ಹೆತ್ತವರೆಲ್ಲ ಬಂದು ತಮ್ಮ ಮಕ್ಕಳಿಗೆ ಉತ್ತರ ಹೇಳಿಕೊಡ್ತಾ ಇದ್ರೆ, ಇನ್ನೊಂದ್ಕಡೆ ವಿದ್ಯಾರ್ಥಿಗಳು ಪರಸ್ಪರ ಆನ್ಸರ್ ಶೇರ್ ಮಾಡಿಕೊಳ್ಳೋದು ಕಾಮನ್ ಆಗಿಬಿಡ್ತು. ಇದೆಲ್ಲವೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಶಿಕ್ಷಕರ ಎದುರೇ ನಡೆದಿದೆ. ಆದ್ರೆ ಈ ಪರೀಕ್ಷಾ ಅಕ್ರಮವನ್ನು ಯಾರೊಬ್ಬರೂ ತಡೆದಿಲ್ಲ.

ಈ ನಕಲು ಮಾಫಿಯಾದ ಸಹಾಯ ಪಡೆಯಲು ಪ್ರತಿ ವಿದ್ಯಾರ್ಥಿ 5000-15,000 ರೂಪಾಯಿ ಹಣ ಕೊಟ್ಟಿದ್ದಾನೆ. ಈ ಮಾಫಿಯಾದವರ ಬಳಿ ಎಲ್ಲಾ ತರಗತಿಯ ಮಕ್ಕಳಿಗಾಗಿ ಚೀಟಿಂಗ್ ಪ್ಯಾಕೇಜ್ ಗಳೇ ಇವೆ. ಕಾಪಿ ಚೀಟಿ ಕೊಡಲು ವಂಚಕರು 5000 ಪಡೆಯುತ್ತಾರೆ.  ಉತ್ತರ ಡಿಕ್ಟೇಟ್ ಮಾಡಲು 10,000,  ವಂಚಕರೇ ಬಂದು ಪರೀಕ್ಷೆ ಬರೆಯಲು 15,000 ರೂಪಾಯಿ ಚಾರ್ಜ್ ಮಾಡ್ತಾರೆ.

ಇಂತಹ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಶಿಕ್ಷಣ ಇಲಾಖೆ ಹೇಳ್ತಾ ಇದೆ. ಆದ್ರೆ ಕಣ್ಣೆದುರಲ್ಲೇ ಸಾಮೂಹಿಕ ನಕಲು ನಡೆಯುತ್ತಿದ್ರೂ ಶಿಕ್ಷಕರು ಅದನ್ನು ತಡೆದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...