alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಭಿಚಾರ ಪ್ರಕರಣದಲ್ಲಿ ಪುರುಷರಿಗೆ ಮಾತ್ರ ಶಿಕ್ಷೆಯೇಕೆ? ಸುಪ್ರೀಂ ಪ್ರಶ್ನೆ

ವ್ಯಭಿಚಾರದ ವಿರೋಧಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 497 ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಮಹತ್ವದ ಹೇಳಿಕೆ ನೀಡಿದೆ. ಇದ್ರಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರೂ ದೋಷಿಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿವಾಹಿತ ಮಹಿಳೆ, ವಿವಾಹಿತ ಪುರುಷನ ಜೊತೆ ಸಂಬಂಧ ಬೆಳೆಸಿದ್ರೆ ಪುರುಷರೇ ಯಾಕೆ ದೋಷಿಗಳಾಗ್ತಾರೆ?. ಮಹಿಳೆಯರು ಕೂಡ ಇದಕ್ಕೆ ಜವಾಬ್ದಾರರು ಎಂದು ಕೋರ್ಟ್ ಹೇಳಿದೆ. ವಿವಾಹಿತ ಪುರುಷ, ವಿವಾಹಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ್ರೆ ಇದು ವ್ಯಭಿಚಾರವಲ್ಲವೆಂದು ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ಮದುವೆ ಪವಿತ್ರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಇಬ್ಬರಿಗೂ ಇದೆ. ವಿವಾಹಿತ ಮಹಿಳೆ, ವಿವಾಹಿತ ಪುರುಷನ ಜೊತೆ ಸಂಬಂಧ ಬೆಳೆಸಿದ್ರೆ ಪುರುಷನನ್ನು ದೋಷಿ ಎನ್ನಲಾಗುತ್ತದೆ. ಸೆಕ್ಷನ್ 497ರ ಪ್ರಕಾರ ಪುರುಷನನ್ನು ದೋಷಿ ಎನ್ನಲಾಗುತ್ತದೆ. ಪುರುಷನಿಗೆ  ಮಾತ್ರ 5 ವರ್ಷದ ಶಿಕ್ಷೆ ನೀಡಲಾಗುತ್ತದೆ. ಮಹಿಳೆಯರಿಗೆ ಮಾತ್ರ ಯಾವುದೇ ಶಿಕ್ಷೆ ನೀಡಲಾಗುವುದಿಲ್ಲ. ಇದು ಸಮಾನತೆ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ. ಜೋಸೆಫ್ ಶೈನ್ ಎಂಬುವವರು ಸೆಕ್ಷನ್ 497 ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು 7 ಸದಸ್ಯರ ಪೀಠಕ್ಕೆ ವರ್ಗ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...